ಒಂದು ಲಾರಿಯಿಂದ ಒಂದು ತಾಸು ಟ್ರಾಫಿಕ್ ಜಾಮ್

Tragic jam in mundgod
Published on

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಅಂಚಿಗಿರುವ ಟೈಲ್ಸ್ ಅಂಗಡಿಗೆ ಟೈಲ್ಸ್ ತುಂಬಿಕೊಂಡು ಬಂದಿದ್ದ ಬ್ರಹತ್ ಲಾರಿಯೊಂದು ಅಂಗಡಿಯ ಬಳಿ ಹಿಮ್ಮುಖವಾಗಿ ಚಲಿಸುವಾಗ ಲಾರಿಯ ಎಕ್ಸೆಲ್ ಕಟ್ಟಾಗಿ ಲಾರಿ ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಒಂದು ತಾಸಿಗೂ ಅಧಿಕ ಸಮಯ ಸಂಚಾರಕ್ಕೆ ಅಡಚಣೆವುಂಟಾದ ಘಟನೆ ಸೋಮವಾರ ಜರುಗಿತು.

ಜೆಕೆ ಟೈಲ್ಸ್ ಎಂಬ ಅಂಗಡಿಗೆ ಹೊರ ರಾಜ್ಯದಿಂದ ಬ್ರಹತ್ ಲಾರಿಯೊಂದು ಟೈಲ್ಸ್ ತುಂಬಿಕೊಂಡು ಬಂದಿತ್ತು. ಅಂಗಡಿಯ ಪಕ್ಕದಲ್ಲೇ ಲಾರಿಯನ್ನು ಹಿಮ್ಮುಖವಾಗಿ ನಿಲ್ಲಿಸಿ ಟೈಲ್ಸ್ ಖಾಲಿ ಮಾಡಲು ಲಾರಿಯ ಚಾಲಕ ಲಾರಿಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿರುವಾಗ ಲಾರಿಯ ಎಕ್ಸೆಲ್ ಕಟ್ ಅಗಿ ಲಾರಿ  ಹಿಂದೆ ಮುಂದಕ್ಕೆ ಚಲಿಸದಂತಾಗಿ ಹೆದ್ದಾರಿಗೆ  ಅಡ್ಡವಾಗಿ ನಿಂತಿತು. ಇದರಿಂದ ಎರಡು ಕಡೆಗಳಲ್ಲಿ ನೂರಾರು ವಾಹನಗಳು ಸಾಲಾಗಿ ನಿಲ್ಲುವಂತಾಯಿತು. ಬೈಕ್ ಹಾಗೂ ಕಾರ್ ಗಳು ಪಕ್ಕದ ಖಾಲಿ ಜಾಗೆಯಲ್ಲಿ ಕೆಸರಲ್ಲಿ ನಿಧಾನವಾಗಿ ಚಲಿಸಿದವು ಆದರೆ ಬಸ್,ಲಾರಿ,ಶಾಲಾ ಮಕ್ಕಳ ಸಾಗಿಸುವ ವಾಹನಗಳು ಒಂದು ತಾಸಿಗೂ ಅಧಿಕ ಸಮಯ ನಿಲ್ಲುವಂತಾಯಿತು. ಪೊಲೀಸರು ಎರಡು ಕ್ರೇನ್ ತರಿಸಿ ಲಾರಿ ತೆರವು ಮಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net