ಗೋವು ಮಾಂಸ ಸಾಗಾಟ, ಮೂವರ ಬಂಧನ

Trafficking of beef, arrest of three
ಕಮತಗಿ ಪಟ್ಟಣದಲ್ಲಿ ಅಕ್ರಮವಾಗಿ ಗೋ ಹಾಗೂ ಎಮ್ಮೆ ಮಾಂಸ ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ಹುನಗುಂದ ಸಿಪಿಐ ಎಸ್.ಎ. ಸವದಿ ಭೇಟಿ ನೀಡಿ ಪರಿಶೀಲಿಸಿದರು.
Published on

ಕಮತಗಿ: ದ್ವಿಚಕ್ರ ವಾಹನ ಮೇಲೆ ಅಕ್ರಮವಾಗಿ ಗೋವು, ಎಮ್ಮೆ ಮಾಂಸ ಸಾಗಿಸುತ್ತಿದ್ದ ಸಂದರ್ಭ ಅಮಿನಗಡ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಕಮತಗಿಯ ಶಬ್ಬೀರ್ ಕಮಲಸಾಬ್ ಬೇಪಾರಿ, ಕಮಲಸಾಬ್ ಅಬ್ದುಲರೆಹಮಾನ್ ಬೇಪಾರಿ ಎಂಬುವರು ತಮ್ಮ ಮನೆಯಲ್ಲಿ ಅಕ್ರಮವಾಗಿ ಗೋವು ಎಮ್ಮೆ ಮಾಂಸವನ್ನು ಮಾರುವುದಕ್ಕಾಗಿ ಸಂಗ್ರಹಿಸಿಟ್ಟಿದ್ದರು. ಭಾನುವಾರ ಮೆಹಬೂಬಸಾಬ್ ಅಬ್ದುಲಗಫರಸಾಬ್ ಬೇಪಾರಿ, ಮೌಲಾಲಿ ಅಬ್ದುಲಹಾಸಿಮ್ ಮುಲ್ಲಾ ಎಂಬುವವರು ದ್ವಿಚಕ್ರ ವಾಹನ ಮೇಲೆ ಪ್ಲಾಸ್ಟಿಕ್ ಚೀಲದಲ್ಲಿ ಮಾಂಸ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾರೆ.

ಕಮಲಸಾಬ್ ಬೇಪಾರಿ ತಲೆಮರೆಸಿಕೊಂಡಿದ್ದು, ಆತನ ಶೋಧನೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಬಾಗಲಕೋಟೆ ಉಪವಿಭಾಗದ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಹುನಗುಂದ ಸಿಪಿಐ ಎಸ್.ಎ. ಸವದಿ, ಅಮಿನಗಡ ಪಿಎಸ್‌ಐ ಶಿವಾನಂದ ಸಿಂಗನ್ನವರ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net