ಸಿಗ್ನಲ್‌ವರೆಗೆ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ಮನವಿ

27082022-gangavati-anjanadri-traficjam
Published on


ಬೆಂಗಳೂರು: ಕೆಲವರ ಒತ್ತಡಕ್ಕೆ ಮಣಿದು ಕೆಲವೊಂದು ಮಾರ್ಪಾಡುಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಜಯನಗರದ ಅರವಿಂದ ಜಂಕ್ಷನ್‌ನಿಂದ ಹಿಡಿದು ರಾಜಲಕ್ಷ್ಮಿ ಸಿಗ್ನಲ್‌ವರೆಗೆ ಅಧಿಕ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಮೊದಲು ಜಯನಗರದ ಆರ್.ವಿ.ಡೆಂಟಲ್‌ನಿಂದ ಅರವಿಂದ ಜಂಕ್ಷನ್‌ವರೆಗೆ ಫ್ರೀ ಲ್‌ಟೆ ಟರ್ನ್ ಇತ್ತು. ಅದನ್ನು ಈಗ ರದ್ದುಪಡಿಸಲಾಗಿದೆ. ಬದಲಾಗಿ ರೈಟ್ ಟರ್ನ್ ಕೊಡಲಾಗಿದೆ. ಈ ರಸ್ತೆ ಜಯದೇವ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಈ ಮಾರ್ಗದಲ್ಲಿ ಹೆಚ್ಚಿನ ವಾಹನಗಳು ಹೋಗುವುದಿಲ್ಲ. ಮೊದಲು ಶಾಲಿನಿ ಮೈದಾನದಿಂದ ಅರವಿಂದ ಜಂಕ್ಷನ್‌ವರೆಗೆ ಫ್ರೀ ಲ್‌ಟೆ ಟರ್ನ್ ಇತ್ತು. ಇದೀಗ ಫ್ರೀ ಲ್‌ಟೆ ಟರ್ನ್ ನಿಲ್ಲಿಸಿರುವುದರಿಂದ ಅರವಿಂದ ಜಂಕ್ಷನ್‌ನಿಂದ ರಾಜಲಕ್ಷ್ಮಿ ಸಿಗ್ನಲ್ ಮತ್ತು ಎಂ.ಪಿ ಕಚೇರಿವರೆಗೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಜತೆಗೆ ಜೆ.ಪಿ ನಗರ ಔಟರ್ ರಿಂಗ್ ರಸ್ತೆ ೧೪ ಮೈನ್, ೧೫ ಕ್ರಾಸ್‌ನಲ್ಲಿ ಇದ್ದಂತಹ ಸೆಂಟ್ರಲ್ ಮೀಡಿಯನ್ ಬ್ರಿಕ್ಸ್ ತೆಗೆಸಿದ್ದಾರೆ. ಇಂದರಿಂದ ಡಾಲ್ಮಿಯ ಸಿಗ್ನಲ್‌ವರೆಗೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಬರುವಂತಹ ವಾಹನಗಳು ಮಂದಗತಿಯಲ್ಲಿ ಸಾಗುವುದರಿಂದ ಸುಮಾರು ೧ ಕಿ.ಮೀ ನಷ್ಟು ಸಂಚಾರ ಉಂಟಾಗಿ ವಾಹನ ಸವಾರರು ಪರಡಾಡುತ್ತಿದ್ದಾರೆ. ಡಾ.ಎಂ.ಎ.ಸಲೀಂ ಅವರು ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆಗೆ ಕೆಲವೊಂದು ಸಲಹೆಗಳನ್ನು ನೀಡಿ ಸಂಚಾರ ದಟ್ಟಣೆ ಸಮಸ್ಯೆಯನ್ನು ಬಗೆಹರಿಸಿದ್ದರು. ಇದೀಗ ಅವರು ಬೇರೆ ಇಲಾಖೆಗೆ ವರ್ಗಾವಣೆಯಾಗುತ್ತಿಂದತೆ ಈ ಭಾಗದ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದ್ದು, ಸುಗಮ ಸಂಚಾರ ಕೈಗೊಳ್ಳಲು ಸಂಚಾರ ಪೊಲೀಸ್ ಸಿಬ್ಬಂದಿ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗಮನ ಹರಿಸಿ ಇಲ್ಲಿನ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net