

ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಯಾವುದಕ್ಕೆ ಎಷ್ಟು ದಂಡ ಬೀಳಲಿದೆ ಎಂಬುದರ ವಿವರ ಇಲ್ಲಿದೆ.
ಕರ್ಕಶ ಆರ್ನ್, ಸಮವಸ್ತ್ರ ಧರಿಸದಿರುವುದು, ನಂಬರ್ ಪ್ಲೇಟ್ ಇಲ್ಲದಿರುವುದು/ ಡಿಫೆಕ್ಟಿವ್, ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ, ಪೊಲೀಸ್ ಸಿಗ್ನಲ್ ಉಲ್ಲಂಘನೆ, ಏಕಮುಖ ಸಂಚಾರ, ನಿಲ್ದಾಣವಲ್ಲದ ಸ್ಥಳದಲ್ಲಿ ಪ್ರಯಾಣಿಕರನ್ನು ಹತ್ತಿಸುವುದು, ಪರವಾನಗಿ/ವಿಮೆ/ನೋಂದಣಿ/ಅರ್ಹತಾ ಪತ್ರ ಹಾಜರುವುದು ಪಡಿಸದಿರುವುದು, ಆಟೋ ಮೀಟರ್ ಇಲ್ಲದಿರುವುದು, ಬಾಡಿಗೆ ಹೋಗಲು ನಿರಾಕರಿಸುವುದು, ಮೀಟರ್‌ಗಿಂತ ಹೆಚ್ಚು ಹಣ ವಸೂಲಿ, ಸೀಟ್ ಬೆಲ್ಟ್ ಹಾಕದೆ ವಾಹನ ಚಾಲನೆ, ದೋಷಪೂರಿತ ಸೈಲೆನ್ಸರ್, ರಾಂಗ್ ಸೈಡ್ ವಾಹನ ಚಾಲನೆಗೆ ತಲಾ 500 ರೂ. ದಂಡ ಪಾವತಿಸಬೇಕಾಗಿದೆ.
ಡಿಎಲ್ ಇಲ್ಲದೆ ವಾಹನ ಚಾಲನೆ, ರಸ್ತೆ ಮಧ್ಯೆ ನಿಲುಗಡೆ, ವಾಯು ಮಾಲಿನ್ಯ ಪ್ರಮಾಣಪತ್ರ ಇಲ್ಲದಿರುವುದು, ವಿಮೆ ಇಲ್ಲದಿರುವುದು, ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್, ಮಾನಸಿಕ ಅಸ್ವಸ್ಥತೆ ಅಥವಾ ದೈಹಿಕ ಅಂಗವಿಲಕತೆ ಹೊಂದಿದವರು ತಲಾ 1,000 ರೂ., ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆಗೆ 1,500 ರೂ., ಪೊಲೀಸ್ ನೋಟಿಸ್‌ಗೆ ಸಹಿ ಹಾಕದಿರುವುದು/ಅಸಭ್ಯ ವರ್ತನೆಗೆ 2000 ರೂ., ವಾಹನ ರೇಸಿಂಗ್ ಮಾಡುವುದಕ್ಕೆ ಮೊದಲ ಬಾರಿಗೆ 5 ಸಾವಿರ ರೂ., 2ನೇ ಬಾರಿಗೆ 10 ಸಾವಿರ ರೂ. ದಂಡ ಬೀಳಲಿದೆ.
ಸಿಗ್ನಲ್ ಜಂಪ್ ಪರಿಶೀಲನೆಗೆ 72 ಕಣ್ಗಾವಲು
ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಜಂಪ್ ಮಾಡುವುದನ್ನು ಗಮನಿಸಲು 72 ಕ್ಯಾಮರಾಗಳಿವೆ. 30 ಕ್ಯಾಮರಾಗಳು ಅತಿ ವೇಗವಾಗಿ ಸಂಚರಿಸುವ ವಾಹನವನ್ನು ಪತ್ತೆ ಮಾಡುತ್ತವೆ. 44 ಕ್ಯಾಮರಾಗಳು ವಾಹನಗಳ ನೋಂದಣಿ ಸಂಖ್ಯೆಯನ್ನು ಗುರುತಿಸುತ್ತವೆ. ಸಿಸಿ ಕ್ಯಾಮರಾಗಳು ಮಾತ್ರವಲ್ಲದೆ, 360 ಡಿಗ್ರಿ ಸುತ್ತಲಿನ ದೃಶ್ಯಾವಳಿಗಳನ್ನು ಸೆರೆ ಹಿಡಿಯುವ ಸ್ಮಾರ್ಟ್ ಪೋಲ್‌ಗಳನ್ನು ಇರಿಸಲಾಗಿದೆ. ಇವೆಲ್ಲವೂ ಒಎಫ್‌ಸಿ ನೆಟ್‌ವರ್ಕ್ ಮೂಲಕ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿರುವ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ದೃಶ್ಯಾವಳಿಗಳನ್ನು ರವಾನಿಸುತ್ತವೆ. ಅಲ್ಲಿರುವ ಸ್ಮಾರ್ಟ್‌ಸಿಟಿ ಹಾಗೂ ಪೊಲೀಸ್ ಸಿಬ್ಬಂದಿ ವಾಹನ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರಿಗೆ ದಂಡ ವಿಧಿಸಲಿದ್ದಾರೆ.