ಸಂಚಾರ ವ್ಯವಸ್ಥೆ ಸುಧಾರಣೆ ಕ್ರಮ

Traffic system improvement measures
ಇಳಕಲ್ಲದಲ್ಲಿ ಅಪಘಾತಗಳ ಸ್ಥಳಗಳನ್ನು ಡಿವೈಎಸ್‌ಪಿ ಪ್ರಭುಗೌಡ , ಸಿಪಿಐ ಸುರೇಶ ಬಂಡೆಗುಂಬಳ, ಪಿಎಸ್‌ಐಗಳಾದ ಕೃಷ್ಣವೇಣಿ, ಶಾಂತಾ ಹಳ್ಳಿ, ನಗರಸಭೆ ಪೌರಾಯುಕ್ತ ರಾಜು ಬಣಕಾರ ಇತರರಿದ್ದರು.
Published on

ಇಳಕಲ್ಲ(ಗ್ರಾ): ನಗರದ ಹೆದ್ದಾರಿಯಲ್ಲಿ ಆಗಾಗ ನಡೆಯುವ ಅಪಘಾತಗಳು ಮತ್ತು ಸಂಚಾರ ನಿಯಮ ಉಲ್ಲಂಘನೆ ತಡೆಯಲು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ.

ಇದಕ್ಕಾಗಿ ಹಲವಾರು ಇಲಾಖೆಗಳ ಮುಖ್ಯಸ್ಥರ ಜತೆಗೆ ಮುಕ್ತವಾಗಿ ಚರ್ಚಿಸಲಾಗಿದೆ.

ಸುಗಮ ಸಂಚಾರ, ಅಪಘಾತ ನಿಯಂತ್ರಣ, ಪಾಕಿರ್ಂಗ್ ವ್ಯವಸ್ಥೆ, ಹೆದ್ದಾರಿಯಲ್ಲಿ ವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್, ನವೀನ ಮಾದರಿಯ ರೋಡ್ ಹಂಪ್ಸ್, ಕ್ಯಾಟ್ ಐಸ್, ರಸ್ತೆಯ ಎರಡೂ ಬದಿಗಳಲ್ಲಿ ಸೂಚನಾ ಲಕ, ಜಿಬಾ ಕ್ರಾಸಿಂಗ್ ವ್ಯವಸ್ಥೆ, ಹೈವೊಲ್ಟೇಜ್ ಸಿಸಿ ಕ್ಯಾಮರಾಗಳ ವ್ಯವಸ್ಥೆ ಮಾಡಲು ನಗರಸಭೆ, ಆರ್‌ಟಿಒ, ಪಿಡಬ್ಲೂೃಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಾರಿಗೆ ಘಟಕದ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ.

ಅಪಘಾತಗಳ ಸ್ಥಳಗಳನ್ನು ಡಿವೈಎಸ್‌ಪಿ ಪ್ರಭುಗೌಡ, ಸಿಪಿಐ ಸುರೇಶ ಬಂಡೆಗುಂಬಳ, ಪಿಎಸ್‌ಐಗಳಾದ ಕೃಷ್ಣವೇಣಿ, ಶಾಂತಾ ಹಳ್ಳಿ ಮತ್ತು ನಗರಸಭೆ ಪೌರಾಯುಕ್ತ ರಾಜು ಬಣಕಾರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net