

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಂಚಾರ ಉಪವಿಭಾಗದ ಅಧೀನ ಠಾಣೆಗಳ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಸವಾರ ಹಾಗೂ ಚಾಲಕರ ಮೇಲೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಜು.13ರಿಂದ 26ರ ತನಕ ಒಟ್ಟು 222 ವಾಹನ ಹಾಗೂ ಚಾಲಕರ ಪರವಾನಗಿ ರದ್ದತಿಗೆ ಆರ್‌ಟಿಒಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅಜಾಗರೂಕತೆೆ, ನಿರ್ಲಕ್ಷೃ, ಅತೀ ವೇಗದ ಚಾಲನೆಗೆ ಸಂಬಂಧಿಸಿ 113, ಕುಡಿದು ಚಾಲನೆಗೆ ಸಂಬಂಧಿಸಿ 1, ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟಕ್ಕೆ ಸಂಬಂಧಿಸಿ 16, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಗೆ ಸಂಬಂಧಿಸಿ 4, ಕೆಂಪು ಸಿಗ್ನಲ್ ಜಂಪ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ 5, ಸಂಚಾರ ವಾಹನಗಳಲ್ಲಿ ಮಿತಿಗಿಂತ ಹೆಚ್ಚು ಪ್ರಯಾಣಿಕರು ಸಾಗಾಟಕ್ಕೆ ಸಂಬಂಧಿಸಿ 4, ದ್ವಿಚಕ್ರ ವಾಹನಗಳಲ್ಲಿ ಮೂರು ಮಂದಿಯ ಸವಾರಿಗೆ ಸಂಬಂಧಿಸಿ 3 ಪ್ರಕರಣಗಳು, ಹೆಲ್ಮೆಟ್ ಧರಿಸದೆ ಚಾಲನೆಗೆ ಸಂಬಂಧಿಸಿ 59 ಹಾಗೂ ಸೀಟ್‌ಬೆಲ್ಟ್ ಧರಿಸದೆ ವಾಹನ ಚಾಲನೆ ಸಂಬಂಧಿಸಿ 17 ಪ್ರಕರಣಗಳಲ್ಲಿ ಸವಾರ ಹಾಗೂ ಚಾಲಕರ ಡ್ರೆವಿಂಗ್ ಲೈಸೆನ್ಸ್ ಅಮಾನತಿಗೆ ಪೊಲೀಸ್ ಇಲಾಖೆ ಆರ್‌ಟಿಒಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.