ವಿಆರ್‌ಎಲ್ ಲಾಜಿಸ್ಟಿಕ್ಸ್ ವಾಹನ ಚಾಲಕರಿಗೆ ಸಂಚಾರ ನಿಯಮ ಜಾಗೃತಿ

21
Published on

ಮೈಸೂರು: ವಿಆರ್‌ಎಲ್ ಲಾಜಿಸ್ಟಿಕ್ಸ್ ವಾಹನಗಳ ಚಾಲಕರಿಗೆ ನಗರದಲ್ಲಿ ಸೋಮವಾರ ಸಂಚಾರ ನಿಯಮ ಜಾಗೃತಿ ಮೂಡಿಸಲಾಯಿತು.

ನಗರದ ಎನ್.ಆರ್.ಸಂಚಾರ ಠಾಣೆ ಪೊಲೀಸರಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಎನ್.ಆರ್.ಠಾಣೆ ಸಂಚಾರ ಎಎಸ್‌ಐ ಮಹದೇವಸ್ವಾಮಿ, ಪೇದೆ ಬಿ.ಎಂ.ಮಹದೇವಸ್ವಾಮಿ, ವಿಆರ್‌ಎಲ್ ಲಾಜಿಸ್ಟಿಕ್ಸ್‌ನ ಎಜಿಎಂ ಸದಾಶಿವಮೂರ್ತಿ, ಟಿಪಿಟಿ ಮ್ಯಾನೇಜರ್ ಹಿರಿಯಣ್ಣ ಇತರರು ಇದ್ದರು.

ವಿಆರ್‌ಎಲ್ ಲಾಜಿಸ್ಟಿಕ್ಸ್ ಪ್ರಧಾನ ವ್ಯವಸ್ಥಾಪಕ ಅಶೋಕ್ ಯಂಡಿಗೇರಿ, ಎನ್.ಆರ್.ಸಂಚಾರ ಠಾಣೆ ಇನ್ಸ್‌ಪೆಕ್ಟರ್ ರೇಖಾಬಾಯಿ, ಸಬ್ ಇನ್ಸ್‌ಪೆಕ್ಟರ್ ಸಿದ್ದೇಶ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net