ವಾಹನ ಚಾಲಕರಿಗೆ ಸಂಚಾರಿ ನಿಯಮ ಜಾಗೃತಿ

Traffic rule awareness for drivers
ಮುದ್ದೇಬಿಹಾಳದ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಸಾಗಿಸುವ ಟ್ರಾೃಕ್ಟರ್‌ಗಳಿಗೆ ರಿಫ್ಲೆಕ್ಟರ್​ ಬ್ಯಾನರ್ ಅಳವಡಿಸಿ ಚಾಲಕರಿಗೆ ಸಂಚಾರದ ನಿಯಮಗಳಿರುವ ನೋಟಿಸ್ ನೀಡಲಾಯಿತು. ಡಿಎಸ್ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈ ಸಂಜಯ್ ತಿಪ್ಪರಡ್ಡಿ ಇದ್ದಾರೆ.
Published on

ಮುದ್ದೇಬಿಹಾಳ: ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿರುವ ಟ್ರಾೃಕ್ಟರ್, ಲಾರಿ ಇನ್ನಿತರ ವಾಹನಗಳ ಚಾಲಕರು, ಮಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರಿಗೆ, ಇತರ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ವಾಹನ ಓಡಿಸಬೇಕು ಎಂದು ಬಸವನಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ ಸೂಚನೆ ನೀಡಿದರು.

ತಾಲೂಕಿನ ಯರಗಲ್ಲ ಹತ್ತಿರ ಇರುವ ಬಾಲಾಜಿ ಸಕ್ಕರೆ ಕಾರ್ಖಾನೆಯ ಕೇನ್ ಯಾರ್ಡನಲ್ಲಿ ಕಾರ್ಖಾನೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಬಹುತೇಕರು ರಾತ್ರಿ ಸಮಯದಲ್ಲಿ ಕಬ್ಬು ಸಾಗಿಸುತ್ತಾರೆ. ರಾತ್ರಿ ಕಬ್ಬು ತುಂಬಿದ ವಾಹನ ಓಡಿಸಲು ನಿಯಮಗಳಿವೆ. ಬೇಕಾಬಿಟ್ಟಿ ಓಡಿಸುವಂತಿಲ್ಲ ಎಂದು ತಿಳಿವಳಿಕೆ ಹೇಳಿದರು.

ಯಾವುದೇ ಕಾರಣಕ್ಕೂ ಕಬ್ಬು ತುಂಬಿದ ವಾಹನಗಳನ್ನು ಇತರೆ ವಾಹನಗಳಿಂದ ಓವರ್‌ಟೇಕ್ ಮಾಡಬಾರದು, ಹಿಂದೆ ಅಥವಾ ಮುಂದೆ ಬರುವ ವಾಹನಗಳಿಗೆ ದಾರಿ ಬಿಟ್ಟುಕೊಡಬೇಕು. ರಾತ್ರಿ ವೇಳೆ ರಸ್ತೆ ಖುಲ್ಲಾ ಇರುತ್ತದೆ ಎಂದು ತಿಳಿದು ಬೇಕಾಬಿಟ್ಟಿ ವಾಹನ ಓಡಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭ ನಿಯಮಗಳ ಮಾಹಿತಿ ಇರುವ ಮತ್ತು ಅನುಸರಿಸಬೇಕಾದ ಕ್ರಮಗಳ ವಿವರ ಇರುವ ನೋಟೀಸ್ ಅನ್ನು ಚಾಲಕರು, ಮಾಲಕರು ಮತ್ತು ಕಾರ್ಖಾನೆಯ ಆಡಳಿತ ಮಂಡಳಿಯವರಿಗೆ ನೀಡಲಾಯಿತು.

ಟ್ರಾೃಕ್ಟರ್ ಹಿಂಬದಿಯಲ್ಲಿ  ರಿಫ್ಲೆಕ್ಟರ್​ ಬ್ಯಾನರ್​ ಕಟ್ಟಿ, ರೇಡಿಯಂ ಅಂಟಿಸಲಾಯಿತು. ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಮುದ್ದೇಬಿಹಾಳ ಪಿಎಸೈ ಸಂಜಯ್ ತಿಪ್ಪರಡ್ಡಿ, ತಾಳಿಕೋಟೆ ಪಿಎಸೈ ರಾಮನಗೌಡ ಸಂಕನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net