ಸಂಚಾರಕ್ಕೆ ಗುಣಮಟ್ಟದ ರಸ್ತೆ ಅತ್ಯವಶ್ಯ

29NSG1-Web
ನೇಸರಗಿ ಸಮೀಪದ ವಣ್ಣೂರ- ಮಾಸ್ತಮರಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹಾಂತೇಶ ದೊಡಗೌಡರ ಶನಿವಾರ ಚಾಲನೆ ನೀಡಿದರು. ಎ.ಆರ್. ಮಾಳನ್ನವರ, ಎಸ್.ಎಂ. ಪಾಟೀಲ, ಬಾಬಣ್ಣ ಶೇಬನ್ನವರ, ಆನಂದ ಕಿರಗಿ, ಎಚ್.ಡಿ. ಕಿಲ್ಲೆದಾರ, ಅಡಿವೆಪ್ಪ ಕೂಗನ್ನವರ, ನಿಂಗಪ್ಪ ಪೋತಲಿ, ಟಿ.ಎಂ. ದೇಸಾಯಿ, ಭೀಮಪ್ಪ, ಸೋಮನಟ್ಟಿ, ಮಲ್ಲಯ್ಯ ಯರಗಟ್ಟಿಮಠ, ಮಲ್ಲೇಶ ಚಿಕ್ಕೋಡಿ ಇತರರಿದ್ದರು.
Published on

ನೇಸರಗಿ: ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆಯಿಂದ ಮಂಜೂರಾದ ಅನುದಾನದಡಿ ವಿವಿಧ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಕಿತ್ತೂರ ಮತ ಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಶನಿವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮತ ಕ್ಷೇತ್ರದಲ್ಲಿ ನಾಗರಿಕರಿಗೆ ಯಾವುದೇ ಸಮಸ್ಯೆ ಗಳಾಗದ ರೀತಿಯಲ್ಲಿ ರಸ್ತೆ ಸುಧಾರಣೆ, ರಸ್ತೆಗಳ ಡಾಂಬರೀಕರಣ ಕಾಮಗಾರಿಗಳನ್ನು ನಡೆಸಲಾ ಗುತ್ತಿದ್ದು, ಜನರ ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು. ಗುತ್ತಿಗೆದಾರರು
ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ವಣ್ಣೂರ- ಸುನಕುಂಪಿ- ಮಾಸ್ತಮರಡಿ ರಸ್ತೆ ಸುಧಾರಣೆಗೆ ಲೋಕೋಪಯೋಗಿ ಇಲಾಖೆಯಿಂದ 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ವಣ್ಣೂರು- ಮಾಸ್ತಮರಡಿ ಹೊಲಕ್ಕೆ ಹೋಗುವ ರಸ್ತೆ 25 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು. ಎ.ಆರ್. ಮಾಳನ್ನವರ, ಎಸ್.ಎಂ. ಪಾಟೀಲ, ಬಾಬಣ್ಣ ಶೇಬನ್ನವರ, ಆನಂದ ಕಿರಗಿ, ಎಚ್.ಡಿ. ಕಿಲ್ಲೆದಾರ, ಅಡಿವೆಪ್ಪ ಕೂಗನ್ನವರ, ನಿಂಗಪ್ಪ ಪೋತಲಿ, ಟಿ.ಎಂ. ದೇಸಾಯಿ, ಭೀಮಪ್ಪ, ಸೋಮನಟ್ಟಿ, ಮಲ್ಲಯ್ಯ ಯರಗಟ್ಟಿಮಠ, ಮಲ್ಲೇಶ ಚಿಕ್ಕೋಡಿ, ಯಲ್ಲಪ್ಪ ಚಿಕ್ಕೊಪ್ಪ, ಇಂಜಿನಿಯರ್ ಎಂ.ಬಿ. ಗಣಾಚಾರಿ, ಗ್ರಾ.ಪಂ. ಸದಸ್ಯರು, ಮಗಸಜ್ಜಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net