ಯಳಂದೂರು-ವಾಹನಗಳ ನಿಲ್ದಾಣದ ಅವ್ಯವಸ್ಥೆ.

Oplus_131072
Oplus_131072
Published on

ಯಳಂದೂರು: ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಬಹುತೇಕ ಪಟ್ಟಣದ ರಸ್ತೆ ಬದಿಯಲ್ಲಿ ಬೈಕ್, ಕಾರು ಮತ್ತು ಬಸ್‌ಗಳು ಸೇರಿದಂತೆ ಇತರೆ ವಾಹನಗಳನ್ನು ಅಡ್ಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ದಿನನಿತ್ಯವೂ ಆಗುವ ದಟ್ಟಣೆಯಿಂದ ವಾಹನ ಸವಾರರು ಪ್ರಯಾಸಪಡುವ ಸ್ಥಿತಿ ನಿರ್ಮಾಣವಾಗುತ್ತಿದೆ.! ಬಸ್ ನಿಲ್ದಾಣ, ಗಾಂಧಿವೃತ್ತ, ಎಬಿಎಂ ಸರ್ಕಲ್, ಯರಿಯೂರು ಕ್ರಾಸ್ ಮಾರ್ಗದಲ್ಲಿ ( ಬಾಗಲಕೋಟೆ ಯಿಂದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಬಿಳಿಗಿರಂಗನಬೆಟ್ಟಕ್ಕೆ ಸಾಗುವ ರಾಜ್ಯ ಹೆದ್ದಾರಿ) ಸಂಚಾರ ದಟ್ಟಣೆ ಸಮಸ್ಯೆಯು ನಿತ್ಯ ನೂತನವಾಗಿದೆ.

ಈ ರಸ್ತೆಯು ಪಟ್ಟಣದ ವ್ಯಾಪಾರ- ವಹಿವಾಟು ನಡೆಯುವ ಪೇಟೆ ಕೇಂದ್ರದ ಮೂಲಕ ಹಾದು ಹೋಗುತ್ತದೆ. ಈ ಸ್ಥಳದಲ್ಲಿ ಕಿರಿದಾದ ರಸ್ತೆ ಇರುವ ಕಾರಣ ದ್ವಿಚಕ್ರ ವಾಹನ,ಬಸ್ ಹಾಗೂ ಲಾರಿಗಳೆಲ್ಲವೂ ಕ್ರಮ ಬದ್ಧವಾಗಿ ಚಲಿಸಲು ಸಾಧ್ಯವಾಗುತ್ತಿಲ್ಲ. ಕೆಲವರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಕಾರಣ ನಿತ್ಯವೂ ಸಂಚಾರ ದಟ್ಟಣೆ ಬಗೆಹರಿಯದ ಸಮಸ್ಯೆಯಾಗಿದೆ. ವಾಹನಗಳ ಸುಗಮ ಸಂಚಾರ ತೊಡಕಾಗಿರುವ ಕಾರಣ ಕೆಲವು ವೇಳೆ 108 ವಾಹನ ಸಾಗಲೂ ವಿಳಂಬವಾಗಿ ಅವು ರಸ್ತೆ ಮಧ್ಯೆಯೇ ಜಾಮ್ ಆಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತುರ್ತು ಇದ್ದ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ವಿಳಂಬವಾಗುತ್ತದೆ. ಅಪಘಾತಕ್ಕೆ ಒಳಗಾದವರು ಈ ರಸ್ತೆಯಲ್ಲಿ ಸಿಲುಕಿಕೊಂಡರೆ ಅವರ ಸ್ಥಿತಿ ದೇವರೇಗತಿ ಎಂಬಂತೆ ಆಗುತ್ತದೆ. ಶಾಲಾ- ಕಾಲೇಜು ಆರಂಭ ಮತ್ತು ಬಿಡುವ ವೇಳೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ವಿದ್ಯಾರ್ಥಿಗಳು ಟ್ರಾಫಿಕ್‌ನಲ್ಲೇ ಬಹು ಸಮಯ ಸಿಲುಕಬೇಕಾಗುತ್ತದೆ. ಇವೆಲ್ಲವನ್ನೂ ನಿತ್ಯವೂ ಗಮನಿಸಿದ್ದರೂ, ಪರಿಸ್ಥಿತಿ ಗೊತ್ತಿದ್ದರೂ ವಾಹನಗಳ ಸುಗಮ ಸಂಚಾರಕ್ಕೆ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮವನ್ನು ಈವರೆಗೂ ಕೈಗೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net