ಮನಬಂದಂತೆ ವಾಹನ ಸಂಚಾರ

Traffic
Published on

ರಾಣೆಬೆನ್ನೂರ: ನಗರದ ಹೃದಯ ಭಾಗವಾದ ಕೋರ್ಟ್ ವೃತ್ತ ಹಾಗೂ ಬಸ್ ನಿಲ್ದಾಣದ ವೃತ್ತದಲ್ಲಿ ಕಳೆದ ಹದಿನೈದು ದಿನಗಳಿಂದ ಸಿಗ್ನಲ್ ದೀಪಗಳು ಬಂದ್ ಆಗಿವೆ. ಪೊಲೀಸ್ ಇಲಾಖೆ ದುರಸ್ತಿಗೆ ಮುಂದಾಗದ ಕಾರಣ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತಂತಾಗಿದೆ.

ಇಲ್ಲಿನ ಸಂಚಾರ ಪೊಲೀಸ್ ಠಾಣೆ ವತಿಯಿಂದ ನಗರದ ಕೋಟ್ ವೃತ್ತ, ಹಲಗೇರಿ ವೃತ್ತ, ಪೋಸ್ಟ್ ವೃತ್ತದಲ್ಲಿ ಸಂಚಾರ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿತ್ತು. ಹಲಗೇರಿ ಮತ್ತು ಪೋಸ್ಟ್ ವೃತ್ತದ ಸಿಗ್ನಲ್ ದೀಪಗಳು ಆರಂಭದ ಕೆಲ ದಿನಗಳಲ್ಲಿ ಮಾತ್ರ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಬಂದ್ ಆಗಿವೆ.

ಕಳೆದ ಮೇ ತಿಂಗಳಿನಲ್ಲಿಯೂ ಕೋರ್ಟ್ ಹಾಗೂ ಬಸ್ ನಿಲ್ದಾಣದ ವೃತ್ತದಲ್ಲಿ ಸಿಗ್ನಲ್ ದೀಪ ಕೆಟ್ಟು ಹೋಗಿದ್ದವು. ಆಗ ಪೊಲೀಸರು ದುರಸ್ತಿ ಕಾರ್ಯ ಕೈಗೊಂಡಿದ್ದರು. ಆದರೀಗ ಮತ್ತೆ ದುರಸ್ತಿಗೊಳಪಟ್ಟಿವೆ. ಹೀಗಾಗಿ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾಗಿದ್ದಾರೆ. ಈ ಮಾರ್ಗದಲ್ಲಿ ನಗರದ ಬಸ್ ನಿಲ್ದಾಣ, ನಗರಸಭೆ, ತಾಪಂ ಸೇರಿ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಆಗಿದ್ದರಿಂದ ನಿತ್ಯವೂ ವಾಹನ ದಟ್ಟಣೆ ಕಂಡು ಬರುತ್ತದೆ.

ಸಿಗ್ನಲ್ ದೀಪಗಳು ಕೆಟ್ಟು ನಿಂತಿರುವ ಕಾರಣ ವಾಹನಗಳನ್ನು ಮನಬಂದಂತೆ ಚಲಾಯಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ರಸ್ತೆ ದಾಟುವುದು ಕಷ್ಟವಾಗಿದೆ. ಪೊಲೀಸ್ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಿಗ್ನಿಲ್ ದೀಪ ಸರಿಪಡಿಸಬೇಕು.I ಹನುಮಂತಪ್ಪ ಕೆ., ಸ್ಥಳೀಯ ನಿವಾಸಿಕೇಬಲ್ ತುಂಡಾಗಿರುವುದರಿಂದ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.I ಶಂಕರ ಎಸ್.ಕೆ., ಸಿಪಿಐ, ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net