ಎನ್.ಆರ್.ಪುರ ತಾಲೂಕಿನಲ್ಲಿ 20ರಿಂದ 23 ಕಾಡಾನೆಗಳ ಸಂಚಾರ

21 nrp 2
Published on

ಎನ್.ಆರ್.ಪುರ: ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಹಳ್ಳೂರಗದ್ದೆ, ಹಾರೇಕೊಪ್ಪ ಬಸ್‌ನಿಲ್ದಾಣ, ಚಿನ್ನಮಣಿ, ಜೇನುಕಟ್ಟು ಸರ, ಭದ್ರಾ ಕಾಲನಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಮಾಹಿತಿಯಂತೆ ತಾಲೂಕು ವ್ಯಾಪ್ತಿಯಲ್ಲಿ 20 ರಿಂದ 23 ಕಾಡಾನೆಗಳು ಸುತ್ತಾಡುತ್ತಿದೆ ಎನ್ನಲಾಗಿದೆ.

ಶುಕ್ರವಾರ ಸಂಜೆ ಹಳ್ಳೂರಗದ್ದೆಯಲ್ಲಿ ಆನೆಗಳು ಕೌಲದಹಳ್ಳಕ್ಕೆ ಬಂದು ನೀರು ಕುಡಿದು ಬಿದಿರು ತಿನ್ನುತ್ತಿರುವುದನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ತಾಲೂಕಿಗೆ ಮೂಡಿಗೆರೆಯಿಂದ ಆಗಮಿಸಿರುವ ಎಲಿಂಟ್ ಟಾಸ್ಕ್ ಪೋರ್ಸ ತಂಡದವರು ಪಟಾಕಿ ಸಿಡಿಸಿ ಆನೆಯನ್ನು ಮತ್ತೆ ಆರಂಬಳ್ಳಿ ಭದ್ರಾಅಭಯಾರಣ್ಯಕ್ಕೆ ಓಡಿಸಿದ್ದಾರೆ. ಭದ್ರಾ ಕಾಲನಿಯಲ್ಲಿ ಎರಡು ಆನೆ ಕಾಣಿಸಿಕೊಂಡಿದ್ದು ಆ ಆನೆಗಳನ್ನು ಸಹ ಅರಣ್ಯ ಇಲಾಖೆ ಸಿಬ್ಬಂದಿಗಳು ಆರಂಬಳ್ಳಿ ಅಭಯಾರಣ್ಯಕ್ಕೆ ಓಡಿಸಿದ್ದಾರೆ. ಸಂಜೆ ವೇಳಗೆ ಮತ್ತೆ ಜೇನುಕಟ್ಟೆಸರ ಎಂಬ ಹಳ್ಳಿಯಲ್ಲಿ ಮತ್ತೆ ಆನೆ ಕಾಣಿಸಿಕೊಂಡಿದೆ.

ಅರಣ್ಯ ಇಲಾಖೆ ಮಾಹಿತಿಯಂತೆ ತಾಲೂಕಿನ ವ್ಯಾಪ್ತಿಯಲ್ಲಿ 20 ರಿಂದ 23 ಕಾಡಾನೆಗಳು ಸುತ್ತಾಡುತ್ತಿದೆ. ಈಗ ಜನರು ಹಗಲಲ್ಲೂ ರಸ್ತೆಯಲ್ಲಿ ಓಡಾಡಲು ಭಯ ಪಡಬೇಕಾಗಿದೆ. ವಿಶೇಷವಾಗಿ ಈ ವರ್ಷ ಮುತ್ತಿನಕೊಪ್ಪ, ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲೇ ಕಾಡಾನೆಗಳು ಸುತ್ತಾಡುತ್ತಿದೆ. ಮುತ್ತಿನಕೊಪ್ಪ, ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಆನೆಗಳು ಸುತ್ತಾಟ ಮಾಡುತ್ತಿರುವುದರಿಂದ ಗ್ರಾಮಸ್ಥರು ಕಾಡಿನಕಡೆ ಹೋಗಬಾರದು. ಆನೆಗಳನ್ನು ಕಂಡ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅರಣ್ಯ ಇಲಾಖೆ ಮೈಕ್ ಮೂಲಕ ಎಚ್ಚರಿಕೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net