ನೀರು ನಿಂತು ರಸ್ತೆ ಸಂಚಾರ ಬಂದ್

revadihal
Published on

ಹುಬ್ಬಳ್ಳಿ: ನಾಲ್ಕು ದಿನಗಳ ಹಿಂದೆ ಸುರಿದ ಮಳೆಯಿಂದ ಹುಬ್ಬಳ್ಳಿ-ಧಾರವಾಡ ಬೈಪಾಸ್​ನ ಗೋಕುಲ ಸೇತುವೆ ಕೆಳಗೆ ನೀರು ನಿಂತ ಪರಿಣಾಮ ಗೋಕುಲ-ರೇವಡಿಹಾಳ ನಡುವಿನ ಸಂಚಾರ ಬಂದ್ ಆಗಿದೆ.

ಸೇತುವೆ ಕೆಳಗೆ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿದೆ. ಪಾದಚಾರಿಗಳು, ವಾಹನ ಸವಾರರು ಸಂಚರಿಸಲು ಸಾಧ್ಯವೇ ಇಲ್ಲ. ಶಾಲಾ ವಾಹನ (ಬಸ್)ಗಳು ಸಹ ಸಂಚರಿಸುತ್ತಿಲ್ಲ. ನಗರ ಸಾರಿಗೆ ಬಸ್​ಗಳು ಸಂಚಾರ ನಿಲ್ಲಿಸಿವೆ. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಅಗಲೀಕರಣಕ್ಕಾಗಿ ಸೇತುವೆ ಬಳಿ ಕಾಮಗಾರಿ (ಪಿಲ್ಲರ್ ನಿರ್ವಣ) ಕೈಗೊಂಡಿರುವುದರಿಂದ ನೀರು ಹರಿದು ಹೋಗಲು ಸ್ಥಳಾವಕಾಶವಿಲ್ಲದೇ ಕೆರೆ ನಿರ್ವಣವಾಗಿದೆ.

ಗೋಕುಲ-ರೇವಡಿಹಾಳ ನಡುವೆ ಸಂಚರಿಸುವವರು ಬದಲಿ ಮಾರ್ಗದಲ್ಲಿ ಓಡಾಡುವ ಪರಿಸ್ಥಿತಿ ನಿರ್ವಣವಾಗಿದೆ. ಶಾಲಾ ವಾಹನಗಳು ಸಹ 1-2 ಕಿಲೋಮೀಟರ್ ಸುತ್ತಿ ಬಳಸಿ ಸಂಚರಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net