ಹೊಂಡಗುಂಡಿಯಿಂದ ಸಂಚಾರ ದುಸ್ತರ

patholes
Published on

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಹೆಬ್ರಿ ಹಾಗೂ ಕುಂದಾಪುರ ಸಂಪರ್ಕಿಸಲು ಬಳಸುತ್ತಿದ್ದ ಬದಲಿ ಮಾರ್ಗ ದುರಸ್ತಿ ಇಲ್ಲದೆ, ಸಂಚಾರ ದುಸ್ತರವಾಗಿದೆ. ಭಾರಿ ಗಾತ್ರದ ಹೊಂಡಗುಂಡಿ ರಸ್ತೆಯಲ್ಲಿ ನಿರ್ಮಾಣವಾಗಿ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ.

ಚಾರದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ನಿರ್ಮಾಣ ಪ್ರಸ್ತಾವನೆ ಬಂದಾಗ ಅಲ್ಲಿದ್ದ ಹಳೇ ಸೇತುವೆ ತೆರವು ಮಾಡಿದ ನಂತರ ಕುಂದಾಪುರ ಹಾಗೂ ಹೆಬ್ರಿ ಸಂಪರ್ಕಕ್ಕೆ ರಸ್ತೆ ಇಲ್ಲದಂತಾಯಿತು. ಸಣ್ಣ ನೀರಾವರಿ ಇಲಾಖೆಯವರು ಬದಲಿ ಮಾರ್ಗವಾಗಿ ವಾಹನ ಸಂಚರಿಸಲು ಚಾರ ಬಸದಿ ರಸ್ತೆ ಬಳಸಿಕೊಂಡಿದ್ದರು. ಈಗ ಕಾಮಗಾರಿ ಮುಗಿದು ಸಮಯ ಕಳೆದಿದ್ದರೂ ರಸ್ತೆ ದುರಸ್ತಿ ಆಗಿಲ್ಲ.

ಅಂದು ಉಡುಪಿ ಸಣ್ಣ ನೀರಾವರಿ ಇಲಾಖೆಯವರು ಬದಲಿ ಮಾರ್ಗದ ರಸ್ತೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು, ಸೇತುವೆ ನಿರ್ಮಾಣದ ಬಳಿಕ ರಸ್ತೆ ದುರಸ್ತಿ ಮಾಡಿ ಕೊಡುತ್ತೇವೆ ಎಂದು ವಾಗ್ದಾನ ನೀಡಿದ್ದರು. ಆದರೆ ಈಗ ಅಧಿಕಾರಿಗಳು ನಿರ್ಲಕ್ಷೃ ವಹಿಸುತ್ತಿದ್ದಾರೆ.

ಮಾರ್ಗ ಕುಸಿತ

ಈ ಹಿಂದೆ ಸಣ್ಣ ನೀರಾವರಿ ಇಲಾಖೆಯವರು ಬದಲಿ ಮಾರ್ಗ ಬಳಸುವ ಮೊದಲು ರಸ್ತೆ ಉತ್ತಮವಾಗಿತ್ತು. ಗ್ರಾಮೀಣ ರಸ್ತೆ ಆಗಿದ್ದರಿಂದ ಬೃಹತ್ ವಾಹನಗಳು ಓಡಾಡಿ ರಸ್ತೆ ಸಂಪೂರ್ಣ ಹದಗಟ್ಟಿದೆ. ಅಲ್ಲಲ್ಲಿ ಬೃಹತ್ ಗಾತ್ರದ ಗುಂಡಿಗಳಿವೆ. ಅನೇಕ ಕಡೆ ರಸ್ತೆ ಕುಸಿದಿದೆ. ರಸ್ತೆ ಪಕ್ಕದಲ್ಲಿದ್ದ ಚರಂಡಿ ಮಾಯವಾಗಿವೆ. ಅದನ್ನು ಈ ಹಿಂದೆ ಇದ್ದಂತೆ ನಿರ್ಮಿಸಿ ಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಉತ್ತಮ ರಸ್ತೆಗೆ ಬೇಡಿಕೆ

ರಸ್ತೆ ದೊಡ್ಡ ಪ್ರಮಾಣದಲ್ಲಿ ಕೆಟ್ಟು ಹೋಗಿದ್ದು. ರಸ್ತೆಗೆ ತೇಪೆ ಹಾಕದೆ, ಉತ್ತಮ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರು ಸಂಬಂಧಪಟ್ಟ ಇಂಜಿನಿಯರ್‌ಗೆ ಸೂಚಿಸಿದ್ದಾರೆ. ತೇಪೆ ಕಾರ್ಯದಿಂದ ಮುಂದಿನ ದಿನಗಳಲ್ಲಿ ಮತ್ತೆ ರಸ್ತೆ ಮತ್ತಷ್ಟು ಹದಗೆಡುವ ಭೀತಿ ಸಾರ್ವಜನಿಕ ವಲಯದ್ದು.

ಶಾಲಾ ಮಕ್ಕಳು ಬಳಸುವ ಮಾರ್ಗ

ಹೆಚ್ಚಾಗಿ ಸ್ಥಳೀಯ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಈ ರಸ್ತೆ ಬಳಸುತ್ತಿದ್ದು, ಮಳೆಗಾಲದಲ್ಲಿ ಬಹಳಷ್ಟು ಸ್ವಿಮ್ಮಿಂಗ್ ಫೂಲ್‌ನಂತೆ ರಸ್ತೆ ಬಾಸವಾಗುತ್ತಿತ್ತು. ರಸ್ತೆ ಅವ್ಯವಸ್ಥೆಯಿಂದ ವಾಹನ ಓಡಾಟದ ವೇಳೆ ಮಕ್ಕಳಿಗೆ ಕೆಸರಿನ ಸಿಂಚನ ಆಗುತ್ತಿತ್ತು. ರಸ್ತೆ ದುರಸ್ತಿಗೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಹೆಬ್ರಿ ಹಾಗೂ ಕುಂದಾಪುರ ಸಂಚರಿಸಲು ಬದಲಿ ಮಾರ್ಗವಾಗಿ ಜಾರ ಬಸದಿ ರಸ್ತೆ ಬಳಸಿದ್ದಾರೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿ ಮಾಡಲು ಯಾರು ಬಂದು ಬರುತ್ತಿಲ್ಲ. ಅಂದು ನಾವೇ ಜವಾಬ್ದಾರಿ ಬರುತ್ತೇವೆ ಎಂದವರು, ಸುಮ್ಮನೆ ಕುಳಿತಂತೆ ಇದೆ. ದಯವಿಟ್ಟು ಶೀಘ್ರದಲ್ಲಿ ರಸ್ತೆ ದುರಸ್ತಿಗೊಳಿಸಬೇಕು. - ತಿಪ್ಪೇಸ್ವಾಮಿ, ಸ್ಥಳೀಯರು ಚಾರ ಬಸದಿರಸ್ತೆ ಸಂಪೂರ್ಣ ಹಾಳಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪಂಚಾಯಿತಿ ವತಿಯಿಂದ ದುರಸ್ತಿ ಬಗ್ಗೆ ಪತ್ರ ಬರೆಯುತ್ತೇವೆ. ಮುಂದಿನ ದಿನಗಳಲ್ಲಿ ತುರ್ತು ಕ್ರಮಕೈಗೊಂಡು, ರಸ್ತೆ ದುರಸ್ತಿ ಮಾಡಿಕೊಡಬೇಕು. - ದಿನೇಶ್ ಶೆಟ್ಟಿ ಹುತ್ತುರ್ಕೆ ಚಾರ ಗ್ರಾಪಂ ಅಧ್ಯಕ್ಷ ರಸ್ತೆ ದುರಸ್ತಿ ಬಗ್ಗೆ ಗುತ್ತಿಗೆದಾರರೊಂದಿಗೆ ಶೀಘ್ರದಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ನಾನು ಹೊಸದಾಗಿ ಬಂದಿರುವುದರಿಂದ ಇದರ ಬಗ್ಗೆ ಮಾಹಿತಿ ಇಲ್ಲ. - ರಾಜೇಶ್, ಎಇ, ಸಣ್ಣ ನೀರಾವರಿ ಇಲಾಖೆ, ಉಡುಪಿ https://www.vijayavani.net/compound-gate-donated-by-yuvaka-mandal https://www.vijayavani.net/karkala-has-a-rich-cultural-background

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net