ಗುಂಡಿಮಯ ರಸ್ತೆಯಿಂದ ಸಂಚಾರ ಪ್ರಯಾಸ

vemghal road
Published on

ವೇಮಗಲ್​: ತಾಲೂಕಿನ ವೇಮಗಲ್​ನ ಕರ್ನಾಟಕ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ರಸ್ತೆಯು ಹಳ್ಳ&ಕೊಳ್ಳಗಳಿಂದ ತುಂಬಿಕೊಂಡು ಗುಂಡಿಮಯವಾಗಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ಓಡಾಡಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ.

ರಸ್ತೆಯಲ್ಲಿ ಶಾಲಾ ವಾಹನಗಳು ಮತ್ತು ಖಾಸಗಿ ವಾಹನಗಳ ಸಂಚಾರ ಹೆಚ್ಚಿದ್ದು, ಮಳೆ ಬಂದರೆ ನೀರು ನಿಂತು ಗುಂಡಿ ಯಾವುದು, ರಸ್ತೆ ಯಾವುದು ಎಂಬುದೇ ಗೊತ್ತಾಗುವುದಿಲ್ಲ. ಈ ಬಗ್ಗೆ ಪಟ್ಟಣದ ನಾಗರಿಕರು ಹಲವು ಬಾರಿ ಪಟ್ಟಣ ಪಂಚಾಯಿತಿ ಗಮನಕ್ಕೆ ತಂದರೂ ಸಹ ಯಾಗುದೇ ಪ್ರಯೋಜವಾಗಿಲ್ಲ. ಪ್ರಜ್ಞಾವಂತ ನಾಗರಿಕರು ಗಿಡ ನೇಡುವ ಮೂಲಕ ಅಧಿಕಾರಿಗಳ ಗಮನಕ್ಕೆ ತಂದು ತಮ್ಮ ಆಕ್ರೋಶ ಹೋರ ಹಾಕಿದ್ದಾರೆ.

"ಈ ಕುರಿತು ಇಂಜಿನಿಯರ್​ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಸರ್ಕಾರಿ ಶಾಲೆಯಿಂದ ಗಂಗಮ್ಮ ದೇವಾಲಯದವರೆಗೂ ಸಿಸಿ ರಸ್ತೆ ಮತ್ತು ಡಾಂಬರೀಕರಣ ಹಾಗೂ ಕಚೇರಿ ಮುಂಭಾಗದ ರಸ್ತೆ ಸೇರಿ ಹಲವು ಕಾಮಗಾರಿಗಳು ಆದಷ್ಟು ಬೇಗ ಅಭಿವೃದ್ಧಿ ಮಾಡಲಾಗುವುದು."

- ಎಸ್​.ಎಂ.ವೆಂಕಟೇಶ್​

ವೇಮಗಲ್​ -ಕುರುಗಲ್​ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

"ವೇಮಗಲ್​ ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ತಾಲೂಕಿನ ಹಾದಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಆದರೆ ಈ ರಸ್ತೆ ವೇಮಗಲ್​ ಪಟ್ಟಣದ ಮದ್ಯ ಭಾಗದಲ್ಲಿದ್ದು, 90ರಷ್ಟು ಜನ ತಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಇದೇ ರಸ್ತೆಯಲ್ಲಿ ಓಡಾಡುವುದರಿಂದ ಗುಂಡಿಮಯವಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಬಹಳ ಅನಾನುಕೂಲವಾಗಿದೆ. ಶ್ರೀ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು."

- ಹೆಸರು ಹೇಳಲು ಇಚ್ಛೀಸದ ನಾಗರಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net