ವಿದ್ಯುತ್ ಕಂಬ ಬಿದ್ದು ಸಂಚಾರಕ್ಕೆ ತೊಂದರೆ

ಮುದಗಲ್ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಡುವೆ ವಿದ್ಯುತ್ ಕಂಬ ಉರುಳಿರುವುದು.
ಮುದಗಲ್ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಡುವೆ ವಿದ್ಯುತ್ ಕಂಬ ಉರುಳಿರುವುದು.
Published on

ಮುದಗಲ್: ಪಟ್ಟಣದ ಮೂಲಕ ಹಾದುಹೋಗುವ ರಸ್ತೆಯಲ್ಲಿನ ವಿದ್ಯುತ್ ಕಂಬ ಉರಿಳಿದ್ದು, ಪುರಸಭೆ ಇಲಾಖೆ ನಿರ್ಲಕ್ಷೃದಿಂದ ಸರಿಯಾಗಿ ಸಾಗಿಸದೇ ಬಿಸಾಡಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಯಿತು. ನಗರದ ಮೇಗಳಪೇಟೆಯಿಂದ ಜಾಡರಪೇಟೆವರೆಗೆ ಕೈಗೊಂಡ ಡಿವೈಡರ್ ಕಾಮಗಾರಿ ನಡುವೆ ವಿದ್ಯುತ್ ಕಂಬ ಹಾಕಲಾಗಿದ್ದು, ಈಗಾಗಲೇ 3 ಕಂಬಗಳು ಉರುಳಿ ಪುರಸಭೆ ಅವರಣ ಸೇರಿವೆ. ಅಲ್ಲದೇ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬ ಬಿದ್ದಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಕಳೆದ 6 ತಿಂಗಳಿಂದ ವಿದ್ಯುತ್ ಕಂಬ ಸ್ಥಳಾಂತರಿಸದೇ ನಿರ್ಲಕ್ಷೃ ಮಾಡುತ್ತಿರುವ ಪುರಸಭೆ ಆಡಳಿತಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ವಿದ್ಯುತ್ ಕಂಬ ತೆರವುಗೊಳಿಸಿ ಹಾಳಾದ ಕಂಬಗಳನ್ನು ಸರಿಪಡಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net