ಕಳಸದಲ್ಲಿ ಮರದಬಿದ್ದು ಸಂಚಾರ ಅಸ್ತವ್ಯಸ್ತ

kls1 (1)
Published on

ಕಳಸ: ಕಳಸ ತಾಲೂಕಿನಾದ್ಯಾಂತ ಮಂಗಳವಾರ ಸುರಿದ ಗಾಳಿ, ಮಳೆಗೆ ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯಗೊಂಡಿದೆ.

ಕಳೆದ ಒಂದು ವಾರಗಳಿಂದ ಮಧ್ಯಾಹ್ನದ ಮೇಲೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭಾರಿ ಗಾಳಿ ಮಳೆ ಸುರಿದ ಪರಿಣಾಮ ಬಾಳೆಹೊಳೆ ಸಮೀಪ 33 ಕೆವಿ ಲೈನ್ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕಳಸ-ಬಾಳೆಹೊನ್ನೂರು ರಸ್ತೆಯ ಮುನ್ನೂರ್‌ಪಾಲ್ ಎಂಬಲ್ಲಿ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.

ಇದೇ ಸ್ಥಳದಲ್ಲಿ ಪ್ರವಾಸಿಗರ ಬಸ್ ರಸ್ತೆ ಬದಿಗೆ ಸರಿದಿದ್ದರಿಂದ ಮೂರು ಗಂಟೆಗೂ ಅಧಿಕ ಸಮಯ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಸುಮಾರು ಒಂದು ಗಂಟೆ ಸುರಿದ ಮಳೆಯಿಂದ ಕಳಸ ಪೇಟೆಯ ಮುಖ್ಯ ರಸ್ತೆಯಲ್ಲಿ ನದಿಯನ್ನು ನೆನಪಿಸುವಂತೆ ನೀರು ಹರಿಯಿತು.

ಭಾರಿ ಮಳೆಗೆ ಕೆಲ ಕಾಲ ಪಟ್ಟಣದಲ್ಲಿ ಜನ ಸಂಚಾರವೇ ಇಲ್ಲದಂತಾಗಿತ್ತು. ಬಾಳೆಹೊಳೆ ಭಾಗದಲ್ಲಿ ಸಾಕಷ್ಟು ಮರ ಬಿದ್ದ ಹಿನ್ನಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪ್ರತಿ ದಿನ ಗಾಳಿ ಮಳೆ ಸುರಿಯುತ್ತಿರುವುದರಿಂದ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆ ಉಂಟಾಗಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net