ಉಪ್ಪಿನಂಗಡಿ ಪೇಟೆಯಲ್ಲಿ ವಾಹನ ದಟ್ಟಣೆ : ಚಾಲಕರು ಹೈರಾಣ

traffic
ಉಪ್ಪಿನಂಗಡಿ ಪೇಟೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾದ ಕಾರಣ ಸವಾರರು ಹಾಗೂ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದರು.
Published on

ಉಪ್ಪಿನಂಗಡಿ: ಸಂಚಾರ ನಿಯಂತ್ರಣದ ಲೋಪದಿಂದಾಗಿ ಉಪ್ಪಿನಂಗಡಿ ಪೇಟೆಯಲ್ಲಿ ಸುದೀರ್ಘ ಸಮಯ ವಾಹನ ದಟ್ಟಣೆಯುಂಟಾಗಿ ಸಂಚಾರ ಅಸ್ತವ್ಯಸ್ತವಾದ ಘಟನೆ ಸೋಮವಾರ ನಡೆದಿದೆ.

ಇಲ್ಲಿನ ಹೊಸ ಬಸ್ ನಿಲ್ದಾಣದ ವೃತ್ತದ ಬಳಿ ಸೋಮವಾರ ಬೆಳಗ್ಗೆ ಹನ್ನೊಂದು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆ ತನಕ ವಾಹನ ಸಂಚಾರ ತಡೆ ಹಿಡಿಯಲ್ಪಟ್ಟು ಹೆದ್ದಾರಿಯೂ ಒಳಗೊಂಡಂತೆ ಅಷ್ಟದಿಕ್ಕುಗಳಿಂದಲೂ ವಾಹನಗಳು ಮುಂದುವರಿಯಲಾಗದೆ ಸವಾರರು ಸಂಕಷ್ಟಕ್ಕೀಡಾದರು.

ಮಹಿಳಾ ಹೋಂ ಗಾರ್ಡ್ ಸಮಸ್ಯೆಯನ್ನು ನಿಯಂತ್ರಿಸಲು ವಿಫಲರಾದಾಗ, ಸ್ಥಳೀಯ ವರ್ತಕ ಸಂಘದ ಪದಾಧಿಕಾರಿ ಇರ್ಷಾದ್ ಯು.ಟಿ. ಸಂಚಾರ ನಿಯಂತ್ರಣಕ್ಕಾಗಿ ಶ್ರಮಿಸಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾದರು.

ವಿಳಂಬ ನೀತಿಗೆ ನಾಗರಿಕರು ಕೆಂಡ

ಸ್ಥಳೀಯ ಠಾಣೆಯಲ್ಲಿ ಬಸ್ ನಿಲ್ದಾಣದ ಜಂಕ್ಷನ್ ಬಳಿ ಸಾರ್ವಜನಿಕರ ದೇಣಿಗೆಯಿಂದ ಅಳವಡಿಸಿದ ಸಿ.ಸಿ.ಕ್ಯಾಮರಾ ಇದ್ದು, ಸಮಸ್ಯೆಯನ್ನು ಠಾಣೆಯಲ್ಲಿಯೇ ನೋಡಿ ತಿಳಿಯಬಹುದಾದರೂ, ಸಂಚಾರವನ್ನು ನಿಯಂತ್ರಿಸಲು ಪೊಲೀಸರು ವಿಳಂಬ ಧೋರಣೆ ಅನುಸರಿಸಿ, ತಡವಾಗಿ ಆಗಮಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net