ಕಡ್ಡಾಯವಾಗಿ ಹೆಲ್ಮೆಟ್​ ಧರಿಸಿ

6hbd4
Published on

ಹುಮನಾಬಾದ್: ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಜತಗೆ ನಾಲ್ಕು ಚಕ್ರ ವಾಹನ ಚಾಲಕರು ಬೆಲ್ಟ್​ ಹಾಗೂ ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್​ ಧರಿಸಿ ವಾಹನ ಚಲಾಯಿಸುವಂತೆ ಸಂಚಾರ ಠಾಣೆ ಪಿಎಸ್​ಐ ಬಸವಲಿಂಗಪ್ಪ ಕರೆ ನೀಡಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಪೊಲೀಸ್​ ಇಲಾಖೆ ವತಿಯಿಂದ ರಸ್ತೆ ಸುರಕ್ಷತಾ ಹಾಗೂ ಕಡ್ಡಾಯ ಹೆಲ್ಮೆಟ್​ ಜಾಗೃತಿ ಅಭಿಯಾನ ಹಮ್ಮಿಕೊಂಡು ವಾಹನ ಚಾಲಕರಿಗೆ ಹಾಗೂ ಸಾರ್ಜನಿಕರಿಗೆ ರಸ್ತೆ ನಿಯಮ ಪಾಲನೆ ಕುರಿತು ಮಾಹಿತಿ ನೀಡಿದರು. ಸ್ಥಳೀಯ ಠಾಣೆಯ ಪಿಎಸ್​ಐ ತಿಮ್ಮಯ್ಯಾ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳ ಉಲಂಘನೆಯಿಂದ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಸಾವು ಸಂಭವಿಸುತ್ತಿವೆ. ಇದರಲ್ಲಿ ಹೆಲ್ಮೆಟ್​ ಧರಿಸದೆ ದ್ವಿಚಕ್ರ ವಾಹನ ಸವಾರರ ಹೆಚ್ಚಾಗಿ ಅಪಘಾತದಲ್ಲಿ ಸಾಯುತ್ತಿರುವುದು ಕಂಡು ಬರುತ್ತಿದೆ. ಕಾರಣ ಸುರಕ್ಷಿತವಾಗಿ ಪ್ರಯಾಣ ಮಾಡಲು ಕಡ್ಡಾಯವಾಗಿ ಹೆಲ್ಮೇಟ್​ ಧರಿಸಿ, ರಸ್ತೆ ನಿಯಮ ಪಾಲಿಸದ್ದಿದ್ದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿಸಿದರು.

ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಲ್ಮೆಟ್​ ಧರಿಸದೆ ಸಂಚರಿಸುತ್ತಿರುವ ದ್ವಿಚಕ್ರ ವಾಹನಗಳಿಗೆ ಹಿಡಿದು, ದಂಢದ ರೂಪದಲ್ಲಿ ಹೊಸ ಹೆಲ್ಮೇಟ್​ ನೀಡಿ, ಜಾಗೃತಿ ಮೂಡಿಸಿದರು. ಎಎಸ್​ಐ ರಾಜಕುಮಾರ, ಸಿಬ್ಬಂದಿಗಳಾದ ಬಸವರಡ್ಡಿ, ರಾಘವೇಂದ್ರ, ಶ್ರೀ ಕಾಂತ, ಆಕಾಶ ಸೇರಿದಂತೆ ಇತರೆ ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net