ಜಿಲ್ಲೆಯ ಹಲವೆಡೆ ವಾಹನ ಸಂಚಾರ ದುಸ್ಥರ

traffic
Published on

ಮಡಿಕೇರಿ:

ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆ ಸಮಸ್ಯೆ ಸಾಮಾನ್ಯ ಎಂಬAತಾಗಿದೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಅದರಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಟ್ರಾಫಿಕ್ ತೊಂದರೆ ಸ್ಥಳೀಯರನ್ನು ಹೈರಾಣಾಗಿಸುತ್ತಿದೆ. ಕೆಲವೊಂದು ದಿನಗಳಲ್ಲಿ ಇಲ್ಲಿಯ ರಸ್ತೆಗಳಲ್ಲಿ ವಾಹನ ಓಡಿಸುವುದಿರಲಿ ನಡೆದಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ.

ನಾಪೋಕ್ಲು, ಗೋಣಿಕೊಪ್ಪಲು, ವಿರಾಜಪೇಟೆ ಮತ್ತಿತರ ಕಡೆಗಳಲ್ಲಿ ವಾರದ ಸಂತೆ ದಿನಗಳಲ್ಲಿ ಸಂಚಾರ ದಟ್ಟಣೆಯಿಂದಾಗಿ ಜನಸಾಮಾನ್ಯರು ಪರದಾಡುವಂತಾಗಿದೆ. ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವ ಕುಶಾಲನಗರದಲ್ಲೂ ಈ ಸಮಸ್ಯೆ ಇದೆ. ರಾಷ್ಟಿçÃಯ ಹೆದ್ದಾರಿ 275 ಕುಶಾಲನಗರದ ಮೂಲಕ ಹಾದು ಹೋಗುತ್ತಿದ್ದು, ಟ್ರಾಫಿಕ್‌ನಿಂದಾಗಿ ಇಲ್ಲಿಯೂ ಆಗಾಗ್ಗೆ ವಾಹನ ಸಂಚಾರದಲ್ಲಿ ಅಡಚಣೆ ಆಗುತ್ತಿರುತ್ತದೆ.

ಒಂದು ಕಡೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ ಆಗುತ್ತಿದ್ದು, ಮತ್ತೊಂದು ಕಡೆ ಕೊಡಗಿನಲ್ಲಿ ವಾಹನಗಳ ಸಂಖ್ಯೆಯೂ ಜಾಸ್ತಿ ಆಗುತ್ತಿದೆ. ಆದರೆ ಕೊಡಗಿನ ರಸ್ತೆಗಳು ವಾಹನ ದಟ್ಟಣೆ ಸವಾಲನ್ನು ಎದುರಿಸುವಷ್ಟು ಸುಧಾರಿಸಿಲ್ಲ. ಬಹುತೇಕ ಕಡೆಗಳಲ್ಲಿ ಇನ್ನು ಕೂಡ ಕಿರಿದಾದ ರಸ್ತೆಗಳೇ ಇವೆ. ಮಡಿಕೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ಪಟ್ಟಣಗಳಲ್ಲೂ ರಸ್ತೆಗಳು ಅಗಲವಾಗಿಲ್ಲ. ಬಹಳಷ್ಟು ರಸ್ತೆಗಳು ಒಮ್ಮೆಗೆ ಒಂದು ವಾಹನ ಸಂಚರಿಸುವಷ್ಟು ಮಾತ್ರ ಸಾಧ್ಯವಾಗುವಂತಿದೆ.

ಸೂಕ್ತ ಪಾರ್ಕಿಂಗ್ ವ್ಯವಸ್ಥೆಗಳು ಇಲ್ಲಿದಿರುವುದರಿಂದಲೂ ಸಂಚಾರಿ ದಟ್ಟಣೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಎಲ್ಲಿಯೂ ಪಾರ್ಕಿಂಗ್‌ಗೆ ನಿಗದಿತ ಸ್ಥಳಗಳು ಇಲ್ಲ. ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಹಾಗಾಗಿ ಮೊದಲು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತಾಗಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಲೌಡ್‌ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ಅಭಿಪ್ರಾಯ ಹಂಚಿಕೊAಡಿದ್ದಾರೆ.

ಕೊಡಗಿನ ಮುಖ್ಯ ರಸ್ತೆಗಳು ಅಭಿವೃದ್ಧಿಯೊಂದಿಗೆ ಅಗಲೀಕರಣವಾಗಬೇಕು. ಉತ್ತಮ ರಸ್ತೆಗಳಿದ್ದಾಗ ಮಾತ್ರ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಟ್ರಾಫಿಕ್ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ. ಮಡಿಕೇರಿ - ಮಾದಾಪುರ - ಸೋಮವಾರಪೇಟೆ ರಸ್ತೆಯ ಅಗಲೀಕರಣ ಇಂದಿನ ತುರ್ತು ಅಗತ್ಯವಾಗಿದೆ.

ಹೆಚ್.ಕೆ. ರವಿ, ಕೃಷಿಕ, ಕೋಟೆಯೂರು ಗ್ರಾಮ

ಪ್ರವಾಸಿ ಸ್ಥಳಗಳಲ್ಲಿ ಅನೇಕ ಭಾಗದಲ್ಲಿ ವಾಹನ ನಿಲುಗಡೆಗೆ ಸರಿಯಾದ ಸ್ಥಳ ನಿಗದಿ ಮಾಡದೇ ಇರುವುದರಿಂದ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಾರೆ. ಪಟ್ಟಣ ಪ್ರದೇಶದಲ್ಲಿ ರಸ್ತೆ ಬದಿ ಸೇರಿದಂತೆ ಒಳ ಚರಂಡಿ ಮೇಲೆಯೇ ಅನೇಕರು ಕಾಂಪೌAಡ್ ನಿರ್ಮಿಸಿಕೊಂಡಿರುವುದರಿAದ ವಾಹನ ನಿಲುಗಡೆಗೆ ಸ್ಥಳ ಇಲ್ಲದಂತಾಗಿದೆ. ಸಂಬAಧ ಪಟ್ಟ ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಇಂಥÀ ಒತ್ತುವರಿಯಾಗಿರುವ ರಸ್ತೆ ಬಿಡಿಸಬೇಕು.

ಬಿ.ಆರ್. ಅಣ್ಣಪ್ಪ, ವರ್ತಕ, ಶನಿವಾರಸಂತೆ

ಸಿದ್ದಾಪುರ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು ಇಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ತಿಂಗಳಲ್ಲಿ ಎರಡು ವಾರ ಒಂದೊAದು ಬದಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು

ಸುನಿಲ್ ಚೇರಂಡ, ಕಾಫಿ ಬೆಳೆಗಾರ, ಹೊಸ್ಕೇರಿ ಗ್ರಾಮ

ಕೊಡಗಿನ ಪಟ್ಟಣಗಳಲ್ಲಿ ವಾಹನ ದಟ್ಟಣೆಯನ್ನು ತಡೆಯಲು ಪ್ರವಾಸಿಗರಿಗೂ ಕೂಡ ಕೆಲವೊಂದು ನಿಯಮಗಳನ್ನು ಮಾಡುವುದು ಸೂಕ್ತ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾ ದಿಡ್ಡಿ ನಿಲ್ಲಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು. ಪಾರ್ಕಿಂಗ್ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಪಾರ್ಕಿಂಗ್ ಸ್ಥಳಗಳನ್ನು ವ್ಯವಸ್ಥಿತವಾಗಿ ಪಟ್ಟಣಗಳಲ್ಲಿ ಗುರುತಿಸಿಡಬೇಕು.

ಟಿ.ಎಸ್. ಶ್ರೇಯಾ, ವಿರಾಜಪೇಟೆ

ಪಟ್ಟಣಗಳಲ್ಲಿ ಇರುವ ಸ್ಥಳಗಳಲ್ಲಿ ರಸ್ತೆ ಬದಿ ಅಂಗಡಿ ಮುಂಗಟ್ಟುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮುಂಚೂಣಿಯಲ್ಲಿದ್ದು ಸಾಮಾಜಿಕ ಜಾಲತಾಣಗಳ ಮುಖಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ವಾರಾಂತ್ಯಗಳಲ್ಲಿ ಪ್ರವಾಸಿಗರ ದಂಡು ಮುಖ್ಯ ಪಟ್ಟಣಗಳನ್ನು ಆವರಿಸುತ್ತವೆ. ಇದು ವಾಹನ ದಟ್ಟಣೆಗೆ ಕಾರಣವಾಗುತ್ತದೆ. ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಪಟ್ಟಣಗಳಲ್ಲಿ ಸಂಚಾರ ವ್ಯವಸ್ಥೆ ಹಾಗೂ ವಾಹನ ನಿಲುಗಡೆಗೆ ನಿಯಮ ರೂಪಿಸುವುದು ಸೂಕ್ತ.

ಅಣ್ಣೆಚ್ಚಿ ಬೋಜಮ್ಮ ಕುಶಾಲಪ್ಪ, ನಿವೃತ್ತ ಶಿಕ್ಷಕಿ, ಕೊಳಗದಾಳು ಗ್ರಾಮ

ವಿರಾಜಪೇಟೆಯಲ್ಲಿ ರಸ್ತೆ ಹೆಚ್ಚು ಅಗಲವಿಲ್ಲದ ಕಾರಣ ವಾಹನಗಳನ್ನು ರಸ್ತೆಯ ಬದಿ ಪಾರ್ಕಿಂಗ್ ಮಾಡಿದಾಗ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಇದರೊಂದಿಗೆ ಇತ್ತೀಚಿಗೆ ಬಸ್, ಆಟೋಗಳಂಥ ಸಾರ್ವಜನಿಕ ಸಾರಿಗೆ ಬಳಸುವವರ ಪ್ರಮಾಣ ತೀರ ಕಡಿಮೆ ಆಗಿದೆ. ಪ್ರತಿಯೊಬ್ಬರೂ ಖಾಸಗಿ ವಾಹನದಲ್ಲಿ ಪ್ರಯಾಣ ಬೆಳೆಸುವುದರಿಂದ ಹಾಗೂ ವಾರಾಂತ್ಯದಲ್ಲಿ ಬೇರೆ ಜಿಲ್ಲೆ ಹಾಗೂ ರಾಜ್ಯದ ಪ್ರವಾಸಿಗರು ಜಿಲ್ಲೆಯ ಕಡೆಗೆ ಬರುವುದರಿಂದ ವಾಹನ ದಟ್ಟಣೆ ಹೆಚ್ಚುತ್ತಿದೆ.

ಗೋಪಾಲ್, ಶಿವಕೇರಿ, ವಿರಾಜಪೇಟೆ

ಕೊಡಗಿನ ಪ್ರವಾಸೋದ್ಯಮ ಹಬ್ ಆಗಿ ಬದಲಾಗಿರುವ ಕುಶಾಲನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಇಲ್ಲಿನ ಕಿರಿದಾದ ರಸ್ತೆ ಅಗಲೀಕರಣ ಆಗಬೇಕು. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವುದಕ್ಕೆ ಕಡಿವಾಣ ಹಾಕಿ ಪಾರ್ಕಿಂಗ್‌ಗೆ ನಿಗದಿತ ಸ್ಥಳ ಗುರುತಿಸಬೇಕು. ಪೊಲೀಸರು ಕೆಲವೇ ಪ್ರದೇಶಗಳಲ್ಲಿ ಕೇಂದ್ರೀಕೃತ ಆಗುವುದರ ಬದಲು ನಗರದ ಎಲ್ಲಾ ಕಡೆಗಳಲ್ಲೂ ಸಂಚಾರ ದಟ್ಟಣೆ ನಿಯಂತ್ರಣ ಮಾಡಬೇಕು.

ಕೆ.ಎಸ್. ಮಹೇಶ್, ಕುಶಾಲನಗರ ನಿವಾಸಿ

ನಾಪೋಕ್ಲು ಪಟ್ಟಣದಲ್ಲಿ ರಸ್ತೆ ಅಗಲೀಕರಣ ಆದರೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ಬಗ್ಗೆ ಗ್ರಾಮ ಪಂಚಾಯತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಮೇಲಾಧಿಕಾರಿಗಳಿಗೆ ನೋಟಿಸ್ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಸ್ ನಿಲ್ದಾಣ ನಿರ್ಮಾಣಕ್ಕೆ ಬೇಕಾದ ಜಾಗ ಇತ್ತೀಚೆಗೆ ಗ್ರಾಮ ಪಂಚಾಯತಿ ಹೆಸರಿಗೆ ಆಗಿದ್ದು ಪ್ರಗತಿಯಲ್ಲಿದೆ. ಈ ಸಂಬAಧ ವಿರಾಜಪೇಟೆ ಶಾಸಕ ಎ.ಎಸ್ ಪೋನ್ನಣ್ಣ ಅವರನ್ನು ಪಂಚಾಯತಿ ವತಿಯಿಂದ ಭೇಟಿ ಮಾಡಿ ಮನವಿ ಮಾಡಲಾಗುವುದು.

ವನಜಾಕ್ಷಿ ರೇಣುಕೇಶ್, ಗ್ರಾ.ಪಂ. ಅಧ್ಯಕ್ಷೆ, ನಾಪೋಕ್ಲು

ಮಡಿಕೇರಿ ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಗರಸಭೆ ವತಿಯಿಂದ ಪ್ರಯತ್ನಿಸಲಾಗುತ್ತಿದೆ. ಸದ್ಯದಲ್ಲೇ ಪೊಲೀಸ್, ಸಾರ್ವಜನಿಕರು, ಚೇಂಬರ್ ಆಫ್ ಕಾಮರ್ಸ್ ಸಭೆ ಕರೆದು ಈ ಸಂಬAಧ ಚರ್ಚೆ ನಡೆಸಲಾಗುವುದು. ನಗರದ 2-3 ಕಡೆಗಳಲ್ಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ಟ್ರಾಫಿಕ್ ಸಮಸ್ಯೆ ಬಹುತೇಕ ಪರಿಹಾರ ಆಗಲಿದೆ. ಹೊಸ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಕೆಲವು ಕಡೆಗಳಲ್ಲಿ ಇದಕ್ಕಾಗಿ ಜಾಗ ಗುರುತಿಸಲಾಗುತ್ತಿದೆ.

ಮಹೇಶ್ ಜೈನಿ, ಉಪಾಧ್ಯಕ್ಷ, ನಗರಸಭೆ, ಮಡಿಕೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net