ಸಂಪ್ರದಾಯಗಳಿಗಿದೆ ವೈಜ್ಞಾನಿಕ ಹಿನ್ನೆಲೆ

10Kohalli1
Published on

ಕೋಹಳ್ಳಿ: ಭಾರತೀಯ ಸಂಸ್ಕೃತಿಯಲ್ಲಿನ ಸಂಪ್ರದಾಯಗಳ ವೈಜ್ಞಾನಿಕ ಹಿನ್ನೆಲೆ ಅರಿಯದೇ ಕೆಲವರು ಮೂಢನಂಬಿಕೆ ಎಂದು ಜರಿಯುತ್ತಾರೆ. ವಾಸ್ತವವಾಗಿ ಅವು ಮೂಢನಂಬಿಕೆಗಳಲ್ಲ. ಶತಮಾನಗಳಿಂದ ಪೂರ್ವಜರು ರೂಪಿಸಿದ ಆಳವಾದ ನಂಬಿಕೆಗಳು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಸಂಸ್ಕಾರ ಪ್ರಧಾನ ದೇಶ. ಇಲ್ಲಿ ಆಚರಣೆಗಳು ಸಂಸ್ಕಾರದ ಮೂಲಕ ಪ್ರಾರಂಭವಾಗುವುದು ಸಂಪ್ರದಾಯ. ಈ ಗುಣ ಜಗತ್ತಿನ ಬೇರೆ ದೇಶಗಳಲ್ಲಿ ಅಪರೂಪ. ಸಂಸ್ಕಾರ, ಗೌರವದಿಂದ ಬದುಕುವುದನ್ನು ಕಲಿಸಿಕೊಡುತ್ತವೆ ಎಂದರು.

ವಿದೇಶಗಳಲ್ಲಿ ಮಗು ಹುಟ್ಟಿದ ನಂತರ ಸಂಸ್ಕಾರ ಕಲಿಸಿದರೆ ನಮ್ಮಲ್ಲಿ ಗರ್ಭದಲ್ಲಿರುವಾಗಲೇ ಸಂಸ್ಕಾರ ನೀಡಲಾಗುತ್ತದೆ. ಗರ್ಭದಲ್ಲಿರುವ ಶಿಶುವಿನ ಮೇಲೆ ತಾಯಿಯ ಮನಸ್ಥಿತಿ ನೇರ ಪ್ರಭಾವ ಬೀರುವುದರಿಂದ ತಾಯಿಯಾದವಳು ಒಳ್ಳೆಯದನ್ನೇ ನೋಡಬೇಕು, ಕೇಳಬೇಕು ಮತ್ತು ಯೋಚಿಸಬೇಕು. ಸೀಮಂತಕ್ಕೆ ವೈಜ್ಞಾನಿಕ ಕಾರಣವಿದ್ದು, ವೀರಶೈವ ಧರ್ಮದಲ್ಲಿ ಗರ್ಭಿಣಿಯ ಎಂಟನೇ ತಿಂಗಳಲ್ಲಿ ಗರ್ಭಕ್ಕೆ ಲಿಂಗಧಾರಣೆ ಮಾಡುವ ಸಂಪ್ರದಾಯದಿಂದ ಹುಟ್ಟುವ ಮಗು ದೇಶದ ಸತ್ಪ್ರಜೆಯಾಗಿ ಬೆಳೆಯುತ್ತದೆ. ನಮ್ಮ ದೇಶದ ಸಂಸ್ಕೃತಿಯ ಮೂಲ ತತ್ತ್ವಗಳನ್ನು ಯುವಪೀಳಿಗೆಗೆ ತಿಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕೆಎಎಸ್ ಅಧಿಕಾರಿ ಮಲಗೌಡ ಝರೆ, ರಕ್ಷಾ ಝರೆ, ಕಕಮರಿಯ ಆತ್ಮಾರಾಮ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಭಾಸ್ಕರ ಸ್ವಾಮೀಜಿ, ಗುರುಸಿದ್ಧೇಶ ಸ್ವಾಮೀಜಿ, ಬಾಬುರಾವ ಮಹಾರಾಜರು, ಮಾಜಿ ಶಾಸಕ ಶಹಜಾನ್ ಡೊಂಗರಗಾಂವ್, ಶಂಕರಾನಂದ ಸ್ವಾಮೀಜಿ, ಡಾ.ಎಸ್.ಎಂ.ಜೋಶಿ, ಸಿದ್ಧರಾಮೇಶ್ವರ ಉಕ್ಕಲಿ, ಎಂ.ಕೆ.ಐಗಳಿ, ಮಲ್ಲಪ್ಪ ಸಿಂಧೂರ, ರಾಜಶ್ರೀ ಝರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net