ಪಾರಂಪರಿಕ ಸಂಗೀತೋತ್ಸವ: ಕಲಾವಿದರಿಂದ ರಸದೌತಣ

Traditional music festival:
Published on

ಮೈಸೂರು: ಶ್ರೀ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್ (ಎಸ್‌ಪಿವಿಜಿಎಂಸಿ) ವತಿಯಿಂದ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ 11 ದಿನಗಳ ಕಾಲ ನಡೆಯುವ 62ನೇ ಪಾರಂಪರಿಕ ಸಂಗೀತೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.


ಪ್ರತಿದಿನ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದ ಹಿರಿಯ-ಕಿರಿಯ ಪ್ರತಿಭಾವಂತ ಕಲಾವಿದರು ಪಾಲ್ಗೊಂಡು ನಿನಾದ ರಸದೌತಣವನ್ನು ಕಲಾರಸಿಕರಿಗೆ ಉಣಬಡಿಸಲಿದ್ದಾರೆ.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿದ್ವಾನ್ ಎನ್.ರವಿಕಿರಣ್ ಅವರು, ಪಾರಂಪರಿಕ ಸಂಗೀತಕ್ಕೆ ವೇದಿಕೆ ನೀಡಬೇಕೆಂಬ ದೂರದೃಷ್ಟಿಯಿಂದ ಸ್ಥಾಪಿತವಾದ ಈ ಟ್ರಸ್ಟ್, ಸತತ 6 ದಶಕಗಳಿಂದ ಸಂಗೀತ ಹಬ್ಬವನ್ನು ನಡೆಸಿಕೊಂಡು ಬರುತ್ತಿದೆ. ಇದರೊಂದಿಗೆ, ಲಕ್ಷಾಂತರ ಕಲಾರಸಿಕರಿಗೆ ಭಾರತದ ವೈವಿಧ್ಯಮಯ ಸಂಗೀತವನ್ನು ತಲುಪಿಸಿದೆ ಎಂದರು.


ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಜಗನ್ನಾಥ ಶೆಣೈ ಮಾತನಾಡಿ, ಕಲಾಭಿಮಾನಿಯಾದವರು ಯಾವುದೇ ಕಲಾವಿದರಿಂದ ಉಚಿತವಾಗಿ ಸಂಗೀತ ಕಛೇರಿಯನ್ನು ನೀಡಲು ಆಹ್ವಾನಿಸಬಾರದು. ಕಲೆ ಹಾಗೂ ಕಲಾವಿದರಿಗೆ ಗೌರವ ನೀಡಬೇಕು. ಹೀಗೆ ಮಾಡಿದರೆ ಮಾತ್ರ ಸಂಗೀತ ಬೆಳೆಸುವ, ಕಲೆ ಉಳಿಸುವ ಕೆಲಸವಾಗಲಿದೆ ಎಂದರು.


ಮಾಜಿ ಶಾಸಕ ವಾಸು, ಟ್ರಸ್ಟ್ ಕಾರ್ಯದರ್ಶಿ ಸಿ.ಆರ್.ಹಿಮಾಂಶು ಸೇರಿದಂತೆ ಇನ್ನಿತರರು ಇದ್ದರು.


ವಿದ್ವಾನ್ ಎನ್.ರವಿಕಿರಣ್ ಅವರಿಂದ ಚಿತ್ರವೀಣಾವಾದನ ನಡೆಯಿತು. ವಿದುಷಿ ಗಾಯತ್ರಿ ವಯೋಲಿನ್, ವಿದ್ವಾನರಾದ ಮನ್ನಾರ್‌ಗುಡಿ ಈಶ್ವರನ್ ಮೃದಂಗ, ಜಿ.ಎಸ್.ರಮಾನುಜಮ್ ಘಟಂನಲ್ಲಿ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net