ಸಾಂಪ್ರದಾಯಿಕ ಔಷಧಗಳ ಸಂಶೋಧನೆ ಮುಖ್ಯ

08 Jaggu 5
ಬೆಳಗಾವಿ ಕೆಎಲ್ಇ ಶತಮಾನೋತ್ಸವ ಕೇಂದ್ರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನ ಸಮಾರೋಪದಲ್ಲಿ ವಿಜ್ಞಾನಿ ಸಂಜಯ್ ಮಿಶ್ರಾ ಮಾತನಾಡಿದರು. ಪ್ರೊ.ಮುಖರ್ಜಿ, ಡಾ. ಸುನಿಲ್ ಜಲಾಲ್‌ಪುರೆ, ಡಾ. ಸಿ.ಕೆ. ಕಟಿಯಾರ, ಡಾ. ಸುಬರ್ಣಾ ರಾಯ್, ಡಾ.ಎಂ.ಎಸ್. ಗಣಾಚಾರಿ ಇತರರಿದ್ದರು.
Published on

ಬೆಳಗಾವಿ: ಆರೋಗ್ಯ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಜ್ಞಾನ ಬೆಸೆದು ಹೊಸ ಆವಿಷ್ಕಾರಗಳನ್ನು ಮಾಡುವ ಅಗತ್ಯವಿದೆ ಎಂದು ನವದೆಹಲಿ ಎಚ್.ಜೈವಿಕ ತಂತ್ರಜ್ಞಾನ ವಿಭಾಗದ ವಿಜ್ಞಾನಿ ಸಂಜಯ್ ಮಿಶ್ರಾ ಹೇಳಿದರು.

ಕೆಎಲ್‌ಇ ಾರ್ಮಾಸಿ (ಔಷಧ) ಮಹಾವಿದ್ಯಾಲಯವು ಕೆಎಲ್ಇ ಶತಮಾನೋತ್ಸವ ಕೇಂದ್ರದಲ್ಲಿ ಆಯೋಜಿಸಿರುವ ‘ಔಷಧ ತಂತ್ರಜ್ಞಾನ ಮತ್ತು ೈಟೊ ಾರ್ಮಾಸ್ಯುಟಿಕಲ್ಸ್‌ನಲ್ಲಿನ ನಾವೀನ್ಯತೆಗಳ’ ಕುರಿತು 12ನೇ ಅಂತಾರಾಷ್ಟ್ರೀಯ ಸಮ್ಮೇಳನ ಸಮಾರೋಪ ಸಮಾರಂಭದ ಅತಿಥಿಯಾಗಿ ಅವರು ಮಾತನಾಡಿದರು. ಸಾಂಪ್ರದಾಯಿಕ ಔಷಧಗಳ ಬಗ್ಗೆ ಸಂಶೋಧನೆ ಅಗತ್ಯವಿದೆ ಎಂದರು.

ಎಸ್‌ಎ್ಇ ಸಂಸ್ಥೆಯ ಸಂಸ್ಥಾಪಕ ಪ್ರೊ. ುಲೋಕ ಮುಖರ್ಜಿ ಮಾತನಾಡಿ, ಭವಿಷ್ಯದ ಪೀಳಿಗೆಗಾಗಿ ಸಾಂಪ್ರದಾಯಿಕ ಆರೋಗ್ಯ ಜ್ಞಾನದ ಪ್ರಸಾರದ ಅಗತ್ಯವಿದೆ ಎಂದರು. ಸಮ್ಮೇಳನದ ಸಂಘಟನಾಧ್ಯಕ್ಷ, ಪ್ರಾಚಾರ್ಯ ಡಾ. ಸುನಿಲ್ ಜಲಾಲ್‌ಪುರೆ, ಆರೋಗ್ಯ ವ್ಯವಸ್ಥೆಯ ಅಗತ್ಯತೆಗಳನ್ನು ಪೂರೈಸಲು ಸಾಂಪ್ರದಾಯಿಕ ಔಷಧ ಜ್ಞಾನ ಪ್ರಮುಖವಾಗಿದೆ. ಸಮ್ಮೇಳನ ನಡೆಸಲು ಅವಕಾಶ ನೀಡಿದ ಎಸ್‌ಎ್ಇಗೆ ಅಭಿನಂದಿಸಿದರು. ಎಸ್‌ಎ್ಇ ಸಂಸ್ಥೆಯ ಉಪಾಧ್ಯಕ್ಷ ಡಾ. ಸಿ.ಕೆ. ಕಟಿಯಾರ, ಐಸಿಎಂಆರ್ ನಿರ್ದೇಶಕ ಡಾ. ಸುಬರ್ಣಾ ರಾಯ್, ಕಾಹೆರ್ ರಜಿಸ್ಟ್ರಾರ್ ಡಾ.ಎಂ.ಎಸ್. ಗಣಾಚಾರಿ, ಉಪ ಪ್ರಾಚಾರ್ಯ ಡಾ. ಎಂ.ಬಿ. ಪಾಟೀಲ, ಡಾ. ಪ್ರಮೋದ ಹುರ್ಕಡಲೆ ಇದ್ದರು. ಮೂರು ದಿನಗಳ ಸಮ್ಮೇಳನದಲ್ಲಿ ಗಿಡಮೂಲಿಕೆ ಔಷಧ ಅಭಿವೃದ್ಧಿ, ಔಷಧಶಾಸ, ಸಮಗ್ರ ಔಷಧ, ನಿಯಂತ್ರಕ ಅಂಶಗಳು ಮತ್ತು ಔಷಧ ತಂತ್ರಜ್ಞಾನದಲ್ಲಿನ ಪ್ರಗತಿ ಸೇರಿ ಸಮಗ್ರ ಚರ್ಚೆಗಳಾದವು. ತಾಂತ್ರಿಕ ಅವೇಶನ ನಡೆದವು. ಯುವ ಎಥನೋಾರ್ಮಕಾಲಜಿಸ್ಟ್ ಪ್ರಶಸ್ತಿ, ಅತ್ಯುತ್ತಮ ವೌಖಿಕ ಪ್ರಸ್ತುತಿ ಪ್ರಶಸ್ತಿ ಮತ್ತು ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ ನೀಡಲಾಯಿತು. 21 ದೇಶಗಳಿಂದ ಸುಮಾರು 700 ಪ್ರತಿನಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net