ಪಾರಂಪರಿಕ ಔಷಧಿ ಇಂದಿಗೂ ಪ್ರಸ್ತುತ

29sri-2
Published on

ಶೃಂಗೇರಿ: ಸ್ಥಳೀಯ ಪಾರಂಪರಿಕ ಔಷಧಿಯ ಜ್ಞಾನ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ಸೂಕ್ತ ಮಾರ್ಗವಾಗಿದೆ ಎಂದು ಎಂದು ನಾಟಿ ವೈದ್ಯ ವಿದ್ಯಾಧರ್ ತಿಳಿಸಿದರು.

ಇತ್ತೀಚೆಗೆ ಅಜಸ್ರ ಚಾರೀಟೇಬಲ್ ಟ್ರಸ್ಟ್ ವಾರಳಿ ವಾಸುದೇವರಾವ್ ಸ್ಮರಣಾರ್ಥ ಆಯೋಜಿಸಿದ ಪಾರಂಪರಿಕ ವೈದ್ಯರಿಗೆ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಪಾರಂಪರಿಕ ಔಷಧಿಯ ಅರಿವು ಹಿರಿಯರಿಂದ ಬಂದಂತಹ ಜ್ಞಾನ. ಸಾವಿರಾರು ಜನರಿಗೆ ಔಷಧಗಳನ್ನು ನಿಸ್ವಾರ್ಥವಾಗಿ ನೀಡುವ ಈ ವೈದ್ಯಕೀಯ ಪರಂಪರೆ ಇಂದಿಗೂ ನಡೆಯುತ್ತಿದೆ. ಕಾಮಾಲೆಯಿಂದ ಹಿಡಿದು ಅರ್ಬುದ ರೋಗಗಳಿಗೂ ಔಷಧ ನೀಡುವ ವ್ಯವಸ್ಥೆ ಬಳಕೆಯಲ್ಲಿದೆ ಎಂದರು.

ನಾಟಿ ವೈದ್ಯರಾದ ಶಾಂತಾ ಮಲ್ಲೇಶ್‌ರಾವ್, ವೆಂಕಟಕೃಷ್ಣಯ್ಯ, ಚಂದ್ರಶೇಖರ, ರಾಜಲಕ್ಷ್ಮೀ, ಶಿವಶಂಕರ್, ಆಗುಂಬೆ ಪುಟ್ಟನಾಯ್ಕ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಉಡುಪಿ, ಕೊಪ್ಪ, ಹಾಸನದ ಆರ್ಯುವೇದ ಕಾಲೇಜಿನ ವಿದ್ಯಾರ್ಥಿಗಳು, ಅಜ್ರಸ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಅಭಿಜಿತ್, ಉಪಾಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ಶಶಾಂಕ್, ಪದಾಧಿಕಾರಿಗಳಾದ ವಿಶ್ವಜಿತ್, ಕೀರ್ತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net