ದಾವಣಗೆರೆಯಲ್ಲಿ ಆ.11 ರಿಂದ ಪಾರಂಪರಿಕ ವೈದ್ಯ ತರಬೇತಿ

301
Published on

ದಾವಣಗೆರೆ: ನಗರದ ಎಚ್‌ಕೆಆರ್ ವೃತ್ತದ ಓಂ ಪತಂಜಲಿ ವೆಲ್ನೆಸ್ ಸೆಂಟರ್‌ನಲ್ಲಿ ಆಗಸ್ಟ್ 11 ರಿಂದ ಪಾರಂಪರಿಕ ವೈದ್ಯ ತರಬೇತಿ ಹಮ್ಮಿಕೊಳ್ಳಲಾಗಿದೆ.

ಪಾರಂಪರಿಕ ವೈದ್ಯ ಪರಿಷತ್ ಕಾರ್ಯದರ್ಶಿ ಮಮತಾ ನಾಗರಾಜ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಅಂದು ಬೆಳಗ್ಗೆ 10 ಗಂಟೆಗೆ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಮೈಸೂರು ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಸತ್ಯನಾರಾಯಣ ಭಟ್ಟ ಉದ್ಘಾಟಿಸುವರು ಎಂದರು.

ಪಾರಂಪರಿಕ ವೈದ್ಯ ಪರಿಷತ್ ಹಾಗೂ ಪಾರಂಪರಿಕ ವೈದ್ಯ ಗುರುಕುಲ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಬೆಳಗ್ಗೆ 9- 5 ರ ವರೆಗೆ ನಾಲ್ಕು ಭಾನುವಾರ ತರಬೇತಿ ನಡೆಯಲಿದೆ. ಔಷಧೀಯ ಸಸ್ಯಗಳ ಮಹತ್ವ, ರೋಗ ನಿರೋಧಕ ಶಕ್ತಿ ನೀಡುವ ಸಸ್ಯಗಳ ಪರಿಚಯ, ಹಲವು ಮೂಲಿಕೆಗಳಿಂದ ರೋಗ ಗುಣಪಡಿಸುವಿಕೆ ಕುರಿತು ಹಿರಿಯ ಪಾರಂಪರಿಕ ವೈದ್ಯರು ತರಬೇತಿ ನೀಡುವರು.

ಆಸಕ್ತರು ಆ.8 ರೊಳಗೆ ಹೆಸರು ನೋಂದಾಯಿಸಬೇಕು. ಮಾಹಿತಿಗೆ ನಗರದ ಪಿಜೆ ಬಡಾವಣೆ ಟೆನ್ನಿಸ್ ಕೋರ್ಟ್ ಕಾಂಪ್ಲೆಕ್ಸ್‌ನ ವೈದ್ಯ ಪರಿಷತ್ ಕಚೇರಿ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net