

ಬಾಳೆಹೊನ್ನೂರು: ಮಹಿಳೆಯರನ್ನು ಒಂದೇ ವೇದಿಕೆಯಡಿ ಸಂಘಟಿಸಬೇಕು ಎಂಬ ಉದ್ದೇಶದಿಂದಸಾಂಪ್ರದಾಯಿಕ ಕಲೆಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಭೈರವಿ ಒಕ್ಕಲಿಗರಮಹಿಳಾ ಸಂಘದ ಅಧ್ಯಕ್ಷೆ ಸಿ.ಟಿ.ರೇವತಿ ಹೇಳಿದರು.
ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಭೈರವಿ ಒಕ್ಕಲಿಗರ ಮಹಿಳಾ ಸಂಘದ ಮಲ್ಲಿಗೆತಂಡದಿಂದ ಆಯೋಜಿಸಿದ್ದ ಮಲೆನಾಡ ಸೊಗಡು ಮನರಂಜನಾ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿ, ಭೈರವಿ ಒಕ್ಕಲಿಗರ ಮಹಿಳಾ ಸಂಘದಿಂದ ಮಲ್ಲಿಗೆ, ಪಾರಿಜಾತ, ಸಂಪಿಗೆ,ಸೂರ್ಯಕಾಂತಿ, ಮಂದಾರ ಎಂಬ ತಂಡಗಳನ್ನು ರಚನೆ ಮಾಡಿದ್ದು, ಈ ತಂಡ ಪ್ರತಿಯೊಂದುತಿಂಗಳಿಗೆ ಒಬ್ಬರಂತೆ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ತಮ್ಮಪ್ರತಿಭೆ ಪ್ರದರ್ಶಿಸಲಿದ್ದಾರೆ ಎಂದರು.
ಈ ಬಾರಿ ಮಲ್ಲಿಗೆ ತಂಡದಿಂದ ಮಲೆನಾಡ ಸಾಂಪ್ರದಾಯಿಕ ಕಲೆಗಳಾದ ಭತ್ತ ಕುಟ್ಟುವುದು, ಭತ್ತಕೇರುವುದು, ಬೀಸುವ ಕಲ್ಲಿನಿಂದ ಹಿಟ್ಟು ಮಾಡುವುದು, ಚೆನ್ನೆ ಮಣೆ ಆಟ ಸೇರಿದಂತೆ ವಿವಿಧ
ಗ್ರಾಮೀಣ ಕಲೆಗಳನ್ನು ಪ್ರದರ್ಶಿಸಿ ಯುವಜನರಿಗೆ ತಿಳಿಸಲಾಯಿತು. ಪ್ರತಿಯೊಬ್ಬ ಮಹಿಳೆಯರು
ಸಂಘದ ಮೂಲಕ ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸಬೇಕು ಎಂಬುದು ನಮ್ಮ ಉದ್ದೇಶ
ಎಂದರು.
ಭೈರವಿ ಒಕ್ಕಲಿಗರ ಮಹಿಳಾ ಸಂಘದ ಕಾರ್ಯದರ್ಶಿ ಪ್ರೀತಿ ಉಮೇಶ್, ಖಜಾಂಚಿ ಜ್ಯೋತಿ
ಜಗದೀಶ್, ಮಲ್ಲಿಗೆ ತಂಡದ ನಿರ್ದೇಶಕರಾದ ರೇಖಾ ವೆಂಕಟೇಶ್, ಸುಚೇತಾ ಜಗದೀಶ್, ಮಧುರಹರೀಶ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.