ಟ್ರೇಡಿಂಗ್ ವ್ಯವಹಾರದಲ್ಲಿ 4.20 ಲಕ್ಷ ರೂ. ವಂಚನೆ

udp-19-praud
Published on

ಉಡುಪಿ: ಟೆಲಿಗ್ರಾಮ್ ಆ್ಯಪ್‌ನಲ್ಲಿ ಬಂದ ಮಾಹಿತಿಯಂತೆ ಟ್ರೇಡಿಂಗ್ ವ್ಯವಹಾರಕ್ಕೆ ಹೂಡಿಕೆ ಮಾಡಿ ಹೋಟೆಲ್ ಸಿಬ್ಬಂದಿಯಬ್ಬರು 4.20 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಸಂದೀಪ ಕುಮಾರ್ (32) ಅವರಿಗೆ ಅಪರಿಚಿತ ವ್ಯಕ್ತಿ ಆ್ಯಪ್ ಮೂಲಕ ಲಿಂಕ್ ಕಳುಹಿಸಿ ಟ್ರೇಡಿಂಗ್ ವ್ಯವಹಾರಕ್ಕೆ ಹಣವನ್ನು ಡಿಪಾಸಿಟ್ ಮಾಡುವಂತೆ ತಿಳಿಸಿದ್ದರು. ಆ ಸಮಯದಲ್ಲಿ ಹಣ ವಾಪಾಸು ಬಂದಿದ್ದು, ಪಿರ್ಯಾದಿದಾರರು ಇದನ್ನು ನಂಬಿಕೊಂಡು ತನ್ನ ಕರ್ನಾಟಕ ಬ್ಯಾಂಕ್ ಎಸ್.ಬಿ ಖಾತೆ ಯಿಂದ ಏ.7 ರಿಂದ 13ರವರೆಗೆ ಒಟ್ಟು ರೂ. 4,20,341 ಹಣವನ್ನು ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಯಾರೋ ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಮ್ ಆ್ಯಪ್‌ನಲ್ಲಿ ಟ್ರೇಂಡಿಂಗ್ ವ್ಯವಹಾರ ಎಂದು ನಂಬಿಸಿ ಹಣವನ್ನು ಆನ್ ಲೈನ್ ಮುಖೇನ ಪಡೆದು ಮೋಸ ಮಾಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net