ಚಿನ್ನದ ವ್ಯಾಪಾರ ಅಂತಾ 10 ಲಕ್ಷ ರೂ. ಸಾಲ ಪಡೆದು ಬ್ಯಾಂಕ್‌ಗೆ ಮೋಸ

Crime Logo
Published on

ಶಿಗ್ಗಾಂವಿ: ಅಂಗಡಿಯ ವ್ಯಾಪಾರಕ್ಕಾಗಿ ಬ್ಯಾಂಕ್‌ನಿಂದ 10 ಲಕ್ಷ ರೂ. ಸಾಲ ಪಡೆದುಕೊಂಡು ಮೋಸ ಮಾಡಿದ ಘಟನೆ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶ ವಿನಾಯಕ ರಾಯ್ಕರ ಹಾಗೂ ನಾಗರಾಜ ವಿನಾಯಕ ರಾಯ್ಕರ ಮೋಸ ಮಾಡಿದ ಆರೋಪಿಗಳು.
ಈ ಕುರಿತು ಎಸ್‌ಬಿಐ ಬ್ಯಾಂಕ್‌ನ ಶಿಗ್ಗಾಂವಿ ಶಾಖೆ ವ್ಯವಸ್ಥಾಪಕ ವರಪ್ರಸಾದ ನಾರಾಯಣಸ್ವಾಮಿ ದೂರು ನೀಡಿದ್ದಾರೆ. ಇವರು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ 10 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಆದರೆ, ಸಾಲ ವಾಪಸ್ ತೀರಿಸದೆ ಮೋಸ ಮಾಡಿದ್ದಾರೆ. ಅಲ್ಲದೆ ಸಾಲ ಪಡೆಯುವಾಗ ತಿಳಿಸಿದ ಕಾಮಾಕ್ಷಿ ಜ್ಯೂವೆಲರಿ ಅಂಗಡಿ ಕೂಡ ಇಲ್ಲ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net