ಟ್ರಾೃಕ್ಟರ್ ಟ್ರೇಲರ್ ಕದ್ದವನ ಬಂಧನ

Arrest Kaidhi
Published on

ಕೊಕಟನೂರ: ಅಥಣಿ ತಾಲೂಕಿನ ಬೇವನೂರ ಗ್ರಾಮದಲ್ಲಿ ಕಳ್ಳತನವಾಗಿದ್ದ ಎರಡು ಟ್ಯಾಕ್ಟರ್ ಟ್ರೇಲರ್‌ಗಳನ್ನು ನ.9ರಂದು ಪತ್ತೆ ಹಚ್ಚಿರುವ ಅಥಣಿ ಅಪರಾಧ ವಿಭಾಗ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಡಪಳಾಪುರ ಗ್ರಾಮದ ರಾಜಾರಾಮ್ ರಾವಸಾಬ್ ಮಾನೆ (33) ಬಂಧಿತ. ಬೇವನೂರ ಗ್ರಾಮದ ಕಾಕಾಸಾಬ ಪಾಟೀಲ ಎಂಬುವರಿಗೆ ಸೇರಿದ 2 ಟ್ರೇಲರ್‌ಗಳನ್ನು ಅ.20ರಂದು ರಾತ್ರಿ ಕಳ್ಳತನ ಮಾಡಿದ್ದ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಥಣಿ ಅಪರಾಧ ವಿಭಾಗದ ಪಿಎಸ್‌ಐ ಎಂ.ಡಿ.ಘೋರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ನ.9ರಂದು ಬಂಧಿತ ತನ್ನ ಮನೆ ಎದುರು ನಿಲ್ಲಿಸಿದ್ದ 6 ಲಕ್ಷ ರೂ. ಮೌಲ್ಯದ 2 ಟ್ರೇಲರ್ ವಶಕ್ಕೆ ಪಡೆದಿದ್ದಾರೆ. ವಿ.ಜಿ.ಆರೇರ್, ಎಸ್.ಕೆ.ನೇಮಗೌಡ, ಜಿ.ಎ.ಗುರುಮಠ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net