

ಗುತ್ತಲ: ಸಮೀಪದ ಅಕ್ಕೂರ-ಮರಡೂರ ಮಧ್ಯದ ವರದಾ ನದಿಯ ಬ್ರಿಜ್ ಕಂ ಬ್ಯಾರೇಜ್ನಲ್ಲಿ ಬಿದ್ದಿದ್ದ ಟ್ರ್ಯಾಕ್ಟರ್ ಅನ್ನು ಬುಧವಾರ ಕ್ರೇನ್ ಸಹಾಯದಿಂದ ಮೇಲೆತ್ತಲಾಯಿತು.
ಮರಡೂರ ಗ್ರಾಮದ ದೀಪಕ ಸುರೇಶಗೌಡ ದೊಡ್ಡಗೌಡ್ರ ಹಾಗೂ ಶಾಂತಪ್ಪ ರಾಮನಗೌಡ ಪಾಟೀಲ ಎಂಬುವವರು ಮರಡೂರನಿಂದ ಅಕ್ಕೂರ ಕಡೆಗೆ ಹರಿದಿರುವ ವರದಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಜ್ ಕಂ ಬ್ಯಾರೇಜ್ ದಾಟಿಕೊಂಡು ಟ್ರ್ಯಾಕ್ಟರ್ನಲ್ಲಿ ಮೆಣಸಿನಕಾಯಿ ಚೀಲಗಳನ್ನು ಸಾಗಿಸುತ್ತಿದ್ದಾಗ ಮಂಗಳವಾರ ಟ್ರ್ಯಾಕ್ಟರ್ ನದಿಗೆ ಬಿದ್ದಿತ್ತು. ಅದೃಷ್ಟವಶಾತ್ ಶಾಂತಪ್ಪ ಹಾಗೂ ದೀಪಕ ಪಾರಾಗಿದ್ದರು.
ಆಗ ಟ್ರ್ಯಾಕ್ಟರ್ ನದಿಯಲ್ಲಿ ಮುಳುಗಿತ್ತು. ಬುಧವಾರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕ್ರೇನ್ ಸಹಾಯದಿಂದ ನದಿಯಲ್ಲಿ ಮುಳುಗಿದ್ದ ಟ್ರ್ಯಾಕ್ಟರ್ ಅನ್ನು ಮೇಲೆತ್ತಲಾಯಿತು. ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಪಿ.ಆರ್. ರೇವಣಪ್ಪ ಸೇರಿದಂತೆ ಅಕ್ಕೂರ ಹಾಗೂ ಮರಡೂರ ಗ್ರಾಮಗಳ ನೂರಾರು ಜನರಿದ್ದರು.