

ಚಿಕ್ಕೋಡಿ: ಒಂದು ಟ್ರ್ಯಾಕ್ಟರ್ಗೆ ಕಬ್ಬು ತುಂಬಿದ 12 ಟ್ರೈಲರ್ ಹಾಕಿ ಎಳೆದು ಆರ್ಟಿಒ ನಿಯಮ ಉಲ್ಲಂಘಿಸಿದವರನ್ನು ಅಥಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದರೂರಿನಿಂದ ಅಥಣಿ ಮಾರ್ಗವಾಗಿ ಕೆಂಪವಾಡ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದರು. ಈ ವೇಳೆ 7 ಜನರನ್ನು ವಶಕ್ಕೆ ಪಡೆಯಲಾಗಿದೆ. ಹನಮಂತ ಹುಕ್ಕೇರಿ, ರಾಜು ಬಿಸ್ಟಾನಿ, ವಿಠ್ಠಲ ಮಾಲದಿನ್ನಿ, ರವಿ ನಾಯಿಕವಾಡಿ, ಹಾಲಪ್ಪ ಹುಕ್ಕೇರಿ, ಲಕ್ಷ್ಮಣ ಹೆಗಡೆ, ಹಾಲಪ್ಪ ಮೂಡಲಗಿ ಬಂಧಿತ ಆರೋಪಿಗಳು.
ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)