ಕೊಲೆಗೆ ಯತ್ನ, ಐವರ ಬಂಧನ

arrest
Published on

ಅಥಣಿ: ಅಕ್ರಮ ಮರಳುಗಾರಿಕೆ ತಡೆಯಲು ಹೋಗಿದ್ದ ತಹಸೀಲ್ದಾರ್ ಹಾಗೂ ವಾಹನ ಚಾಲಕನ ಮೇಲೆ ಟ್ರಾೃಕ್ಟರ್ ಹಾಯಿಸಿ ಹತ್ಯೆಗೆ ಯತ್ನಿಸಿದ್ದ ಆರೋಪಿಗಳನ್ನು ಅಥಣಿ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಅಥಣಿ ತಾಲೂಕಿನ ಶಿರೂರ ಗ್ರಾಮದ ಸಾಗರ (ಮಾರುತಿ) ಶ್ರೀರಂಗ ಕೋಳಿ, ಗಣಪತಿ ಮಾನೆ, ನಾರಾಯಣ ಹೊನಮೊರೆ, ಪ್ರಕಾಶ ಹೊನಮೊರೆ ಬಂಧಿತರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏ. 27ರಂದು ತಹಸೀಲ್ದಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ತಾಲೂಕಿನ ಶಿರೂರ-ಖಿಳೇಗಾವಿ ಮಧ್ಯದ ಹಳ್ಳದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ದಾಳಿ ಮಾಡಿ ಮರುಳುತ್ತಿದ್ದಾಗ ಬಂಧನಕ್ಕೊಳಗಾದವರು ಟ್ರಾೃಕ್ಟರ್ ಹಾಯಿಸಿ ಹತ್ಯೆಗೆ ಯತ್ನಿಸಿದ್ದರು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net