ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಟ್ರಾಕ್ಟರ್ ರ‌್ಯಾಲಿ

26-01-Shiva-6
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋ ನೀತಿ ಖಂಡಿಸಿ ರಾಯಚೂರಿನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಜಂಟಿ ಕಾರ್ಮಿಕ ಸಂಘಟನೆಗಳ ವೇದಿಕೆಯಿಂದ ಶುಕ್ರವಾರ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು. ವೇದಿಕೆ ಪದಾಕಾರಿಗಳಾದ ಕೆ.ಜಿ.ವೀರೇಶ, ಕರಿಯಪ್ಪ ಅಚ್ಚೊಳ್ಳಿ, ಎಚ್.ಪದ್ಮಾ, ಪ್ರಭಾಕರ ಪಾಟ್ಿ, ಅಶೋಕ ನಿಲಗಲ್, ಎಸ್.ಮಾರೆಪ್ಪ, ಬೂದಯ್ಯಸ್ವಾಮಿ, ಬಸವಲಿಂಗಪ್ಪ, ಮಲ್ಲನಗೌಡ, ಮಾರೆಪ್ಪ ಹರವಿ, ಜಿಂದಪ್ಪ, ವರಲಕ್ಷ್ಮಿ ಇದ್ದರು.
Published on

ರಾಯಚೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಜಂಟಿ ಕಾರ್ಮಿಕ ಸಂಘಟನೆಗಳ ವೇದಿಕೆಯಿಂದ ನಗರದಲ್ಲಿ ಶುಕ್ರವಾರ ಟ್ರಾಕ್ಟರ್ ರ‌್ಯಾಲಿ ನಡೆಸಲಾಯಿತು.
ನಗರದ ರಾಜೇಂದ್ರ ಗಂಜ್ ಆವರಣದಿಂದ ಆರಂಭವಾದ ರ‌್ಯಾಲಿ ನಗರದ ಪ್ರಮುಖ ಬೀದಿಗಳ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಕೊನೆಗೊಂಡಿತು. ದೆಹಲಿ ರೈತ ಹೋರಾಟದ ಲಿಖಿತ ಭರವಸೆಗಳನ್ನು ಈಡೇರಿಸಬೇಕು. ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ದೆಹಲಿಯ ರೈತ ಹೋರಾಟದ ನಂತರ ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದರೂ, ಎಂಎಸ್‌ಪಿ ಕಾಯ್ದೆ ಜಾರಿ, ವಿದ್ಯುತ್ ತಿದ್ದುಪಡಿ ಮಸೂದೆ ರದ್ದತಿ, ರೈತರ ಸಾಲ ಮನ್ನಾ, ರೈತರ ವಿರುದ್ಧ ದಾಖಲಿಸಲಾಗಿರುವ ಕೇಸ್ ವಾಪಸ್ ಪಡೆಯಬೇಕೆಂಬ ಭರವಸೆಗಳನ್ನು ಇದುವರೆಗೂ ಈಡೇರಿಸಲಾಗಿಲ್ಲ.
ಸರ್ಕಾರದ ಧೋರಣೆಗಳಿಂದ ರೈತರ ಸಾಲಭಾದೆ ಹೆಚ್ಚಳವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಭರವಸೆ ಸುಳ್ಳಾಗಿದೆ. ರಾಜ್ಯದಲ್ಲಿ ಭೀಕರ ಬರವಿದ್ದರೂ ಕೇಂದ್ರ ಸರ್ಕಾರ ಬಿಡಿಗಾಸು ನೀಡದೆ ಅನ್ಯಾಯ ಮಾಡಿದೆ. ಬೆಳೆ ವಿಮೆ ಯೋಜನೆಯಿಂದ ರೈತರಿಗೆ ಯಾವುದೇ ರಕ್ಷಣೆ ಸಿಗುತ್ತಿಲ್ಲ.
ಕೂಡಲೇ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಸಾಲಮನ್ನಾ, ವೈಜ್ಞಾನಿಕ ಬೆಳೆ ನಷ್ಟ ಪರಿಹಾರ ನೀಡಬೇಕು. ಟಿಎಲ್‌ಬಿಸಿ ಮೇಲ್ಭಾಗದಲ್ಲಿ ಅಕ್ರಮ ನೀರಾವರಿಯನ್ನು ತಡೆಗಟ್ಟಬೇಕು. ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ರ‌್ಯಾಲಿಯಲ್ಲಿ ವೇದಿಕೆ ಪದಾಕಾರಿಗಳಾದ ಕೆ.ಜಿ.ವೀರೇಶ, ಕರಿಯಪ್ಪ ಅಚ್ಚೊಳ್ಳಿ, ಎಚ್.ಪದ್ಮಾ, ಪ್ರಭಾಕರ ಪಾಟ್ಿ, ಅಶೋಕ ನಿಲಗಲ್, ಎಸ್.ಮಾರೆಪ್ಪ, ಬೂದಯ್ಯಸ್ವಾಮಿ, ಬಸವಲಿಂಗಪ್ಪ, ಮಲ್ಲನಗೌಡ, ಮಾರೆಪ್ಪ ಹರವಿ, ಜಿಂದಪ್ಪ, ಶ್ರೀನಿವಾಸ ಕಲವಲದೊಡ್ಡಿ, ಖಾಜಾ ಅಸ್ಲಂ ಅಹ್ಮದ್, ರಮೇಶ ವೀರಾಪುರ, ಆಂಜಿನೇಯ ಕುರುಬದೊಡ್ಡಿ, ವರಲಕ್ಷ್ಮಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net