ಟ್ರೇಲರ್ ಹುಕ್ಕು ತುಂಡಾಗಿ ಟ್ರ್ಯಾಕ್ಟರ್ ಪಲ್ಟಿ

12 NRD-2
Published on

ನರಗುಂದ: ಟ್ರೇಲರ್​ನ ಹುಕ್ಕು ತುಂಡಾದ ಪರಿಣಾಮ ಟ್ರ್ಯಾಕ್ಟರ್​ವೊಂದು ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದು ಸಂಪೂರ್ಣ ನಜ್ಜುಗುಜ್ಜಾದ ಘಟನೆ ಪಟ್ಟಣದ ಮದಗುಣಕಿ ರಸ್ತೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಬಳಿ ಶನಿವಾರ ನಡೆದಿದೆ. ರೋಣ ತಾಲೂಕಿನ ಯಾವಗಲ್ಲ ಗ್ರಾಮದ ಯಲಿಗಾರ ಎಂಬುವರಿಗೆ ಈ ಟ್ರ್ಯಾಕ್ಟರ್ ಸೇರಿದೆ.

ಶಾಮಿಯಾನದ ಸಾಮಗ್ರಿ ಹಾಗೂ ಕಬ್ಬಿಣದ ಸರಳುಗಳನ್ನು ತುಂಬಿದ್ದ ಟ್ರ್ಯಾಕ್ಟರ್ ನರಗುಂದದಿಂದ ಯಾವಗಲ್ಲ ಗ್ರಾಮಕ್ಕೆ ತೆರಳುತ್ತಿತ್ತು. ಮದಗುಣಕಿ ರಸ್ತೆಯ ಇಂಜಿನಿಯರಿಂಗ್ ಕಾಲೇಜ್ ಬಳಿ ಬರುತ್ತಿದ್ದಂತೆಯೇ ಟ್ರೇಲರ್​ನ ಹುಕ್ಕು ಏಕಾಏಕಿ ತುಂಡಾಗಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಾಹಿತಿ ತಿಳಿದ ಪೊಲೀಸರು ರಸ್ತೆಯಲ್ಲಿ ಬಿದ್ದ ಟ್ರ್ಯಾಕ್ಟರ್ ಅನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net