ಟ್ರಾೃಕ್ಟರ್ ಪಲ್ಟಿಯಾಗಿ ಬಿದ್ದು ಟ್ರೈಲರ್‌ನಲ್ಲಿ ಕುಳಿತ್ತಿದ್ದ ವ್ಯಕ್ತಿ ಸಾವು

Crime Logo
Published on

ಹಾವೇರಿ: ಟ್ರಾೃಕ್ಟರ್ ಪಲ್ಟಿಯಾಗಿ ಟ್ರೈಲರ್‌ನಲ್ಲಿ ಕುಳಿತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ನಾಗನೂರ ಗ್ರಾಮದ ಬಳಿ ಭಾನುವಾರ ಸಂಭವಿಸಿದೆ.
ಗ್ರಾಮದ ಆನಂದ ಕಲ್ಲಪ್ಪ ಹಡಪದ (33) ಮೃತ ವ್ಯಕ್ತಿ.
ಈತ ಟ್ರಾೃಕ್ಟರ್‌ನ ಟ್ರೈಲರ್‌ನಲ್ಲಿ ಕುಳಿತ್ತಿದ್ದ ಹೋಗುತ್ತಿದ್ದ ಸಮಯದಲ್ಲಿ ಟ್ರಾೃಕ್ಟರ್ ಪಲ್ಟಿಯಾಗಿದೆ. ಇದರಿಂದ ಕೆಳಗೆ ಬಿದ್ದ ಆನಂದ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net