ಹೊತ್ತಿ ಉರಿದ ಟ್ರಾಕ್ಟರ್ ಕಣಕಿ

tractor
Published on

ಕಲಬುರಗಿ: ತಾಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ಟ್ರಾÈಕ್ಟರ್‌ನಲ್ಲಿ ಸಾಗಿಸುತ್ತಿದ್ದ ಎರಡು ಟ್ರಾಲಿ ಕಣಕಿ ಸುಟ್ಟು ಕರಕಲಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಗ್ರಾಮದ ರೈತ ಮಲ್ಲಿನಾಥ ಕೊಳ್ಳುರ ಅವರು ಶಹಾಬಾದ್ ತಾಲೂಕಿನ ಹೊನಗುಂಟಿ ಗ್ರಾಮದಿಂದ ತಮ್ಮ ಜಾನುವಾರುಗಳಿಗಾಗಿ ಕಣಕಿ ಖರೀದಿಸಿ ತೆಗೆದುಕೊಂಡು ಬರುತ್ತಿದ್ದರು. ಒಂದೇ ಟ್ರಾಕ್ಟರ್‌ಗೆ ಎರಡು ಟ್ರಾಲಿ ಜೋಡಿಸಿ, ಕಣಕಿ ತರುತ್ತಿದ್ದ ವೇಳೆ ಗ್ರಾಮದ ಬೀದಿ ಬದಿ ಇರುವ ವಿದ್ಯುತ್ ತಂತಿಯಿAದ ಸ್ಪಾರ್ಕ್ ಆಗಿ ಬೆಂಕಿ ತಗುಲಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ಎರಡು ಟ್ರಾಲಿಗಳಲ್ಲಿನ ಕಣಕಿಗೆ ಆವರಿಸಿದೆ. ೩೫ ಸಾವಿರ ರೂ.ಗೆ ಖರೀದಿ ಮಾಡಿ ತೆಗೆದುಕೊಂಡು ಬರುತ್ತಿದ್ದರು. ಗ್ರಾಮಸ್ಥರು ಸತತ ಪ್ರಯತ್ನದೊಂದಿಗೆ ಅಗ್ನಿಶಾಮಕ ದಳದವರು ಬೆಂಕಿ ನಿಯಂತ್ರಿಸಿ, ಟ್ರಾಕ್ಟರ್‌ನ್ನು ರಕ್ಷಿಸಿದ್ದಾರೆ. ಫರಹತಾಬಾದ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net