

ಹಾವೇರಿ: ಹಾವನೂರ ದ್ಯಾಮವ್ವನ ಜಾತ್ರೆಗೆ ತೆರಳುವ ಸಲುವಾಗಿ ಟ್ರಾ$್ಯಕ್ಟರ್ಗೆ ತಾಡಪತ್ರಿ ಕಟ್ಟಲು ಹೋದ ವ್ಯಕ್ತಿಯೊಬ್ಬ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಹಿರೇಬನ್ನಿಮಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಬಸವರಾಜ ಮೌನೇಶ ಕಮ್ಮಾರ (32) ಮೃತ ವ್ಯಕ್ತಿ.
ಈತ ಟ್ರಾ$್ಯಕ್ಟರ್ಗೆ ತಾಡಪತ್ರಿ ಕಟ್ಟುವ ಸಮಯದಲ್ಲಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.