ಟ್ರ್ಯಾಕ್ಟರ್ ಕೀ ಹಸ್ತಾಂತರ

05raju2
Published on

ಚಾಮರಾಜನಗರ: ತಾಲೂಕಿನ ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 5 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್ ಖರೀದಿಸಿ ಟ್ರ್ಯಾಕ್ಟರ್ ಕೀ ಅನ್ನು ಫಲಾನುಭವಿಗಳಿಗೆ ನೀಡಲಾಯಿತು.

ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಹದೇವಯ್ಯ ರೈತ ಎಲ್. ಶಿವಕುಮಾರ್‌ಗೆ ಟ್ರ್ಯಾಕ್ಟರ್ ಕೀಯನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಹದೇವಯ್ಯ ಅವರು, ನಮ್ಮ ಸಂಘದಿಂದ ಈಗಾಗಲೇ ರೈತರಿಗೆ ಕೃಷಿ ಸಾಲವಾಗಿ 3 ಕೋಟಿ ರೂ.ಗಳಿಗೂ ಹೆಚ್ಚು ಸಾಲ ನೀಡಲಾಗಿದೆ. ವಾಣಿಜ್ಯ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ ಸ್ವಂತ ಉದ್ಯಮವನ್ನು ಹೊಂದಿ ಅರ್ಥಿಕ ಅಭಿವೃದ್ದಿ ಹೊಂದಿಲು ಸಾಲ ನೀಡಲಾಗುತ್ತಿದೆ. ಇನ್ನು ಹೆಚ್ಚಿನ ರೈತರು ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಆಳವಡಿಸಿಕೊಂಡು ವೈಜ್ಞಾನಿಕವಾಗಿ ಬೇಸಾಯ ಮಾಡಿ ಹೆಚ್ಚು ಲಾಭ ಪಡೆದು ಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಘದಿಂದ ಹೆಚ್ಚಿನ ಸಾಲ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಿದ್ದಶೆಟ್ಟಿ, ನಿರ್ದೇಶಕರಾದ ಶಿವಸ್ವಾಮಿ, ಎಸ್. ಶಿವಕುಮಾರ್, ಮಂಜುನಾಥ್, ಎಲ್. ಶಿವಕುಮಾರ್, ಸಿದ್ದೇಗೌಡ, ಎಂ. ಸಿದ್ದನಾಯಕ, ಬಿ. ಸಿದ್ದಮಲ್ಲಪ್ಪ, ರಾಜಮ್ಮ, ಸಿಇಓ ಆಶೋಕ್, ಗುಮಾಸ್ತ ಎಂ. ಪ್ರಸನ್ನಕುಮಾರ್, ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net