ಅಕ್ರಮ ಮರಳು ಸಾಗಿಸುತ್ತಿದ್ದ ಟ್ರಾ$್ಯಕ್ಟರ್​ ವಶ

FotoJet
Published on

ಪಾವಗಡ: ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ದೊಮ್ಮತಮರಿ, ವೆಂಕಟಪುರ, ವಿರುಪಸಮುದ್ರ ಹಾಗೂ ಪಾವಗಡ ಪಟ್ಟಣಕ್ಕೆ ಅಕ್ರಮವಾಗಿ ವಿವಿಧ ಕಡೆ ಮರಳು ಸಾಗಾಟ ಮಾಡುತ್ತಿದ್ದ ಆಂಧ್ರಪ್ರದೇಶದ ಟ್ರಾ$್ಯಕ್ಟರ್​ಗಳನ್ನು ಮಧುಗಿರಿ ಡಿವೈಎಸ್​ಪಿ ನೇತೃತ್ವದ ತಂಡ ಶುಕ್ರವಾರ ವಶಕ್ಕೆ ಪಡೆಸಿದ್ದಾರೆ.

ಮರಳು ತುಂಬಿಕೊಂಡು ದೊಮ್ಮತಮರಿ ಗ್ರಾಮದ ಕಡೆ ಬರುತ್ತಿದ್ದ ಆಂಧ್ರದ 4 ಟ್ರಾ$್ಯಕ್ಟರ್​ಗಳನ್ನು ತಾಲೂಕಿನ ಕಸಬಾ ಹೋಬಳಿಯ ದೊಮ್ಮತಮರಿಯಲ್ಲಿ ಶುಕ್ರವಾರ ಗಸ್ತಿನಲ್ಲಿದ್ದ ಅಪರಾಧ ಪತ್ತೆದಳದ ಸಿಬ್ಬಂದಿ ಕೆ.ಬಿ.ರಾಮಕೃಷ್ಣ ಮತ್ತು ಮಾರುತಿ ಅವರು ಮರಳು ಸಮೇತ ವಶಕ್ಕೆ ಪಡೆದಿದ್ದಾರೆ. ಟ್ರಾ$್ಯಕ್ಟರ್​ಗಳ ಚಾಲಕರಾದ ಆಂಧ್ರದ ರೊದ್ದಂ ಮಂಡಲದ ಆಂಜನೇಯುಲು, ಎಸ್​.ರಾಜು, ಒ.ನರಸಿಂಹಮೂರ್ತಿ, ಇ.ನರಸಿಂಹಮೂರ್ತಿ ವಿರುದ್ಧ ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net