

ಗದಗ: ಬೈಕ್ ಓಡಿಸುವಾದ ಗುಟ್ಕಾ ಉಗುಳಲು ಮುಂದಾದ ವ್ಯಕ್ತಿಗೆ ಟ್ರ್ಯಾಕ್ಟರ್ ರೂಪದಲ್ಲಿ ಜವರಾಯ ಎದುರಾಗಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಸುರಕೋಡ ಗ್ರಾಮದ ಬಳಿ ನಡೆದಿದೆ. ಟ್ರ್ಯಾಕ್ಟರ್ ಬಡಿದ ಹಿನ್ನೆಲೆಯಲ್ಲಿ ಓರ್ವ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರ ಗಾಯಾಳುಗಳಾಗಿದ್ದಾರೆ.
ಒಂದೇ ಬೈಕ್ನಲ್ಲಿ ಮೂರು ಜನ ಸುರಕೋಡ ಗ್ರಾಮದಿಂದ ನರಗುಂದಕ್ಕೆ ಬರುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಕೊನೆಯಲ್ಲಿ ಕುಳಿತಿದ್ದ ನಿಂಗಪ್ಪ ಫಕ್ಕಿರಪ್ಪ ಕಳಕನ್ನವರ (35) ಗುಟ್ಕಾ ಉಗುಳಲು ಮುಂದಾಗಿದ್ದಾನೆ. ಆತ ಬಗ್ಗಿ ಗುಟ್ಕಾ ಉಗುಳಲು ಹೋದ ಕಾರಣ ಬೈಕ್ ಚಾಲಕನಿಗೆ ನಿಯಂತ್ರಣ ತಪ್ಪಿದೆ. ಅದೇ ವೇಳೆಗೆ ಅಲ್ಲಿ ಬರುತ್ತಿದ್ದ ಟ್ಯಾಕ್ಟರ್ಗೆ ಬೈಕ್ ಬಡಿದಿದೆ. ಇದರಿಂದಾಗಿ ನಿಂಗಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಗಂಭೀರ ಗಾಯಾಳುಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನರಗುಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)