ಟ್ರ್ಯಾಕ್ಟರ್ ಪಲ್ಟಿ: ಸಾವು

IMG-20240218-WA0007
Published on

ಜೊಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ವ್ಯ ಜೀವಿ ವಲಯದಲ್ಲಿ ರಾತ್ರಿ ಉಸುಕು ಕಳ್ಳ ಸಾಗಣೆ ಮಾಡುತ್ತಿರುವ ಟ್ಯಾಕ್ಟರ್ ಉರುಳಿ ಬಿದ್ದು ಚಾಲಕ ವಿಶ್ವನಾಥ ಪುರಶೋತ್ತಮ ಆಚಾರಿ ಸುಮಾರು 30 ವರ್ಷ ಸಾ: ಪಣಸೋಲಿ ಮೃತಪಟ್ಟಿದ್ದಾನೆ.

ತಡ ರಾತ್ರಿ ೧೨ ಗಂಟೆಯ ಸುಮಾರಿಗೆ ಪಣಸೋಲಿಯಿಂದ ಸಪಾರಿ ಹೋಗುವ ರಸ್ತೆಯ ಪಕ್ಕ ಟ್ಯಾಕ್ಟರ್ ಉರುಳಿ ಬಿದ್ದು ಅದರಡಿ ಸಿಲುಕಿ ಚಾಲಕ ಮೃತನಾಗಿದ್ದು,ಇನ್ನೊಬ್ಬ ಅರಣ್ಯ ಇಲಾಖೆಯಲ್ಲಿ ವಾಚರ್ ಅಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ದಾಂಡೇಲಿ ಗ್ರಾಮಿಣ ಪೊಲಿಸ್ ಠಾಣೆಯ ಪೊಲೀಸರು ಬೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net