ಟ್ರ್ಯಾಕ್ಟರ್​ ಪಲ್ಟಿ ಹೊಡೆದು ಸ್ಥಳದಲ್ಲೇ ಯುವಕರಿಬ್ಬರ ದಾರುಣ ಸಾವು

Accident
Published on

ಚಿತ್ರದುರ್ಗ: ಟ್ರ್ಯಾಕ್ಟರ್​ ಪಲ್ಟಿ ಹೊಡೆದು ಇಬ್ಬರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಲಂಬಾಣಿಹಟ್ಟಿ ಬಳಿ ಭಾನುವಾರ ನಡೆದಿದೆ.

ಮೃತರನ್ನು ಮೊಳಕಾಲ್ಮೂರು ತಾಲೂಕಿನ ಯರೇನಹಳ್ಳಿ ಗ್ರಾಮದ ಶಿಶಿಕುಮಾರ್ (23) ಮತ್ತು ಬಸವರಾಜ್(24) ಎಂದು ಗುರುತಿಸಲಾಗಿದೆ. ಯರೇನಹಳ್ಳಿಯಿಂದ ಚಿತ್ರದುರ್ಗಕ್ಕೆ ಇಟ್ಟಿಗೆ ಸಾಗಿಸುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ನಾಯಕನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net