ತ್ಯಾಜ್ಯ ನಿರ್ವಹಣೆಗೆ ಟ್ರ್ಯಾಕಿಂಗ್ ​ ಸಿಸ್ಟಂ

dbp
Published on

ದೊಡ್ಡಬಳ್ಳಾಪುರ ನಗರಸಭೆ ಆಡಳಿತದಿಂದ "ನಗರಸೇವಾ' ವೆಬ್​ಸೈಟ್​ ಆರಂಭ

ದೊಡ್ಡಬಳ್ಳಾಪುರ: ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರ ನಗರದಲ್ಲಿ ತ್ಯಾಜ್ಯದ ನಿರ್ವಹಣೆ ಕೈ ಮೀರುತ್ತಿದೆ. ರಸ್ತೆ ಬದಿ, ಖಾಲಿ ಜಾಗ, ಮರಗಿಡಗಳ ಬಳಿ ಹೀಗೆ ಎಲ್ಲೆಂದರಲ್ಲ್ಲಿ ಕಸ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ.

ದೊಡ್ಡಬಳ್ಳಾಪುರದಲ್ಲಿ ದಿನವೊಂದಕ್ಕೆ 35 ಟನ್​ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನಗರಸಭೆ ಹೈಟೆಕ್​ ತಂತ್ರಜ್ಞಾನದತ್ತ ಮುಖಮಾಡಿದೆ. ಈ ಮೂಲಕ ಪ್ರತಿ ಮನೆಯ ಕಸದ ಮೇಲೆ ನಿಗಾವಹಿಸಲು ಸಜ್ಜಾಗಿದೆ.

ಓನ್ಲಿ ಹೈಟೆಕ್​ ಟಚ್​ಕಸ ಸಂಗ್ರಹ ಮಾಡುವ ಆಟೋಗಳಲ್ಲಿ ಅನೌನ್ಸ್​ ಮೆಂಟ್​ ಮಾಡಿ, ಚಲನಚಿತ್ರಗಳ ಹಾಡುಗಳ ಮೂಲಕ ಜನರು ಕಸ ಹಾಕಲು ಒಂದೆಡೆ ಸೇರಿಸಲು ಶ್ರಮಿಸುತ್ತಿದ್ದ ಕಾಲ ಮುಗೀತಾ ಬಂದಿದೆ. ಇನ್ನೇನಿದ್ದರ್ದೂ ಹೈಟೆಕ್​ ಟಚ್​. ನಗರಸಭೆ ಕಾಲ ಬದಲಾದಂತೆ ತ್ಯಾಜ್ಯ ಸಂಗ್ರಹಕ್ಕೆ ಡಿಜಿಟಲ್​ ಟಚ್​ ಕೊಟ್ಟಿದೆ. ಯುವಸಂಚಲನ ಸಂಸ್ಥೆ ಸಹಯೋಗದೊಂದಿಗೆ "ನಗರಸೇವಾ' ಎಂಬ ವೆಬ್​ಸೈಟ್​ ತಯಾರಿಸಿ, ಪ್ರತಿ ಮನೆಯಲ್ಲೂ ಕಸ ಸಂಗ್ರಹಿಸಲು ಯೋಜನೆ ರೂಪಿಸಿದೆ. ಈ ಮೂಲಕ ಹಳೆಯ ಯೋಜನೆಗಳಿಗೆ ಎಳ್ಳುನಿರು ಬಿಟ್ಟು, ತಂತ್ರಜ್ಞಾನದ ಮೊರೆ ಹೋಗಿದೆ.ಕಾರ್ಯನಿರ್ವಹಣೆ ಹೇಗೆ? "ನಗರಸೇವಾ' ವೆಬ್​ಸೈಟ್​ನ ಕ್ಯೂಆರ್​ ಕೋಡ್​ಅನ್ನು ಪ್ರತಿ ಮನೆಗಳಿಗೆ ನೀಡುವುದು. ಪ್ರತಿದಿನ ಕಸ ಸಂಗ್ರಹ ಮಾಡಲು ಮನೆಗಳ ಬಳಿ ಬರುವ ಪೌರಕಾರ್ಮಿಕರು ಕ್ಯೂಆರ್​ ಕೋಡ್​ ಸ್ಕಾ$್ಯನ್​ ಮಾಡುತ್ತಾರೆ. ಬಳಿಕ ಕಸ ಸಂಗ್ರಹಣೆ ಮಾಡಲಾಗುತ್ತದೆ. ಇದರಿಂದ ಯಾರು ಕಸ ಹಾಕುತ್ತಿಲ್ಲ ಎಂಬ ವಿವರ ದಾಖಲಾಗುತ್ತದೆ. ಇನ್ನು ಪೌರಕಾರ್ಮಿಕರು ಕೂಡ ಸಮರ್ಪಕವಾಗಿ ಪ್ರತಿ ವಾರ್ಡ್​ಗೆ ಹೋಗುವುದನ್ನು ಖಚಿತ ಪಡಿಸಿಕೊಳ್ಳಲು ವಾರ್ಡ್​ ಪ್ರವೇಶದಲ್ಲಿ ಕ್ಯುಆರ್​ ಕೋಡ್​ ಅಳವಡಿಸಲಾಗುತ್ತದೆ. ಅದನ್ನು ಸ್ಕಾ$್ಯನ್​ ಮಾಡಿದ ನಂತರ ವಾರ್ಡ್​ ಒಳಗೆ ಪ್ರವೇಶಿಸಬೇಕು. ಈ ಮೂಲಕ ವ್ಯವಸ್ಥಿತವಾಗಿ ತ್ಯಾಜ್ಯ ಸಂಗ್ರಹಣೆಗೆ ಯೋಜನೆ ಮಾಡಿಕೊಳ್ಳಲಾಗಿದೆ. ಈ ವ್ಯವಸ್ಥೆಯನ್ನು ಪ್ರತಿ ವಾರ್ಡ್​ಗೂ ವಿಸ್ತರಿಸಲು ಯೋಜಿಸಲಾಗಿದೆ.

ಕಸ ನೀಡದಿದ್ದರೆ ದಂಡಪ್ರತಿದಿನ ಕಸವನ್ನು ನೀಡುವಾಗ ಕ್ಯುಆರ್​ ಕೋಡ್​ ಸ್ಕಾ$್ಯನ್​ ಮಾಡಿ ಅದರಲ್ಲಿ ನಮೂದಿಸುತ್ತಾರೆ. ಇದರ ಜತೆಗೆ ಹಸಿಕಸ, ಒಣಕಸಗಳ ವಿಂಗಡಣೆಯಾಗಿದೆಯಾ ಎಂಬ ಬಗ್ಗೆ ಇದರಲ್ಲಿ ಮಾಹಿತಿ ಇರಲಿದೆ. ಜತೆಗೆ ಕಸ ನೀಡದ ಮನೆಗಳಿಗೆ ಮೂರು ದಿನಗಳ ಕಾಲ ನೋಟಿಸ್​ ನೀಡುವ ಮೂಲಕ ಕಸವನ್ನು ಪೌರಕಾರ್ಮಿಕರಿಗೆ ನೀಡುವಂತೆ ಸೂಚನೆ ನೀಡಲಾಗುತ್ತದೆ. ಒಂದು ವೇಳೆ ಅದನ್ನು ಮೀರಿ ಕಸ ನೀಡದಿದ್ದಲ್ಲಿ ಅಂತಹವರಿಗೆ ಪ್ರತಿದಿನ 50 ರೂ. ದಂಡ ವಿಧಿಸಲಾಗುತ್ತದೆ. ಜತೆಗೆ ಬೆಳಗ್ಗೆ ಕೆಲಸಕ್ಕೆ ತೆರಳುವವರು ಕಸ ನೀಡಲು ಸಮಸ್ಯೆ ಆದಲ್ಲಿ ಅಂತಹವರಿಗೆ ವಾರ್ಡ್​ಗೊಂದು ಕಸದ ಕಲೆಕ್ಷನ್​ ಕೇಂದ್ರ ಮಾಡಲು ಸಲಹೆ ನೀಡಲಾಗಿದೆ. ಈ ವೆಬ್​ಸೈಟ್​ನಲ್ಲಿ ಮುಂದಿನ ದಿನಗಳಲ್ಲಿ ಕಂದಾಯ ಪಾವತಿಯ ವಿವರ ಕೂಡ ಲಭ್ಯವಾಗಲಿದೆ. ಸರ್ವೇ ಕಾರ್ಯದಲ್ಲಿ ಅದರ ಮಾಹಿತಿ ಪಡೆಯಲಾಗುತ್ತದೆ ಎಂದು ಯುವ ಸಂಚಲನ ಸಂಸ್ಥೆ ಅಧ್ಯಕ್ಷ ಚಿದಾನಂದ ಮೂರ್ತಿ ತಿಳಿಸಿದ್ದಾರೆ.31 ವಾರ್ಡ್​, ದಿನವೊಂದಕ್ಕೆ 35 ಟನ್​: ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್ಗಳಿದ್ದು, 2011ರ ಜನಗಣತಿ ಅನುಸಾರ 93,105 ಮಂದಿ ವಾಸವಾಗಿದ್ದರು. ಆದರೀಗ ಈ ಸಂಖ್ಯೆ ಸುಮಾರು 1.5 ಲಕ್ಷದ ವರೆಗೂ ಏರಿಕೆಯಾಗಿದೆ. ಈಗಾಗಲೇ ಪ್ರತಿ ದಿನಕ್ಕೆ 35&37 ಟನ್​ ತ್ಯಾಜ್ಯ ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿದೆ. ಇದರಲ್ಲಿ 13 &15 ಟನ್​ ಹಸಿ ಕಸ ಸಂಗ್ರಹವಾಗುತ್ತಿದ್ದು, ಇದನ್ನು ಖಾಸಗಿ ಎನ್​.ಜಿ.ಓ ಸಂಸ್ಥೆಯ ಸಹಕಾರದೊಂದಿಗೆ ಗೊಬ್ಬರವನ್ನಾಗಿ ಪರಿವರ್ತಿಸಿ ರೈತರಿಗೆ ತಲುಪಿಸಲಾಗುತ್ತಿದೆ. ಉಳಿಕ 20ಕ್ಕೂ ಹೆಚ್ಚು ಟನ್​ ಒಣಕಸ ವಿಲೇವಾರಿ ನಗರದ ಮೂರು ಕಡೆ ಮೂರು ಡ್ರೈಯಿಂಗ್​ ಪಾಯಿಂಟ್​ ಗಳ ಮೂಲಕ ವಿಲೇ ಮಾಡಲಾಗುತ್ತಿದೆ.ಬ್ಲಾಕ್​ ಪಾಯಿಂಟ್​ ಗುರುತುನಗರಾದ್ಯಂತ 130ಕ್ಕೂ ಅಧಿಕ ಕಸ ಹಾಕುವ ಬ್ಲಾಕ್​ ಪಾಯಿಂಟ್​ ಗುರುತು ಮಾಡಲಾಗಿದೆ. ಈ ಸ್ಥಳಗಳಲ್ಲಿ "ಕಸ ಹಾಕಬಾರದು' ಎಂದು ನಾಮಲಕ ಅಳವಡಿಸಿ ಗಿಡ ನೆಡಲಾಗಿದೆ. ಇಷ್ಟಾಗಿಯೂ ಎಲ್ಲೆಂದರಲ್ಲಿ ಕಸ ಹಾಕುವವರ ಗುರುತು ಮಾಡಲು ಸಿಸಿಟಿವಿ ಮತ್ತು ಪೌರಕಾರ್ಮಿಕರ ಕಣ್ಣಿಗೆ ಬಿದ್ದರೆ ಅವರಿಗೆ ದಂಡದ ಜತೆಗೆ ಅವರ ಮನೆ ಮುಂದೆ ತೆರಳಿ ತಮಟೆ ಬಾರಿಸಿ ಜಾಗೃತಿ ಮೂಡಿಸಲಾಗುತ್ತಿದೆ.

ದೊಡ್ಡಬಳ್ಳಾಪುರ ನಗರಸಭೆ, ಯುವಸಂಚಲನ ಸಹಯೋಗದಲ್ಲಿ ನಗರಸೇವಾ ಎಂಬ ವೆಬ್​ಸೈಟ್​ ರಚಿಸಲಾಗಿದೆ. ಹಸಿಕಸ ಒಣಕಸ ವಿಂಗಡಣೆ ಮಾಡಿ ನೀಡುವವರ ಮಾಹಿತಿ ಸಂಗ್ರಹಿಸಲು ಅನುಕೂಲವಾಗುತ್ತದೆ. ಕಸದ ವಾಹನಗಳು ಬಾರದೆ ಇದ್ದಲ್ಲಿ ಅವರ ಬಗ್ಗೆ ಕೂಡ ದೂರು ನೀಡಲು ಅವಕಾಶವಿದೆ. > ಕಾರ್ತಿಕೇಶ್ವರ್​, ಪೌರಾಯುಕ್ತ, ನಗರಸಭೆ, ದೊಡ್ಡಬಳ್ಳಾಪುರ. ಕಸದ ಸೂಕ್ತ ನಿರ್ವಹಣೆಗೆ ಮೊದಲ ಆದ್ಯತೆ ನೀಡುವಂತೆ ಆಯುಕ್ತರು ಮತ್ತು ಅಧ್ಯಕ್ಷರು ಸೇರಿ ಸದಸ್ಯರಿಗೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಬಿಬಿಎಂಪಿ ಮಾದರಿಯಲ್ಲಿ ಮಾರ್ಷಲ್​ಗಳ ನೇಮಕಕ್ಕೂ ಸಲಹೆ ನೀಡಿದ್ದೇನೆ. ತ್ಯಾಜ್ಯ ನಿರ್ವಹಣೆಗೆ ಜನರ ಸಹಭಾಗಿತ್ವವೂ ಮುಖ್ಯವಾಗಿದೆ. > ಧೀರಜ್​ ಮುನಿರಾಜು, ಶಾಸಕ. ಪ್ರತಿ ದಿನ ಮನೆಗಳ ಮುಂದೆ ನಗರಸಭೆಯ ಕಸದ ಗಾಡಿ ಬಂದರೂ ಕಸವನ್ನು ಗಾಡಿಗೆ ಹಾಕದೆ ರಾತ್ರಿ ವೇಳೆ ರಸ್ತೆ ಬದಿಗಳಲ್ಲಿ ಹಾಕಿ ಸ್ವಚ್ಛತೆ ಹಾಳು ಮಾಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ ದಂಡ ಹಾಕಿ ಮತ್ತೊಮ್ಮೆ ಕಸ ಎಸೆಯದಂತೆ ತಮಟೆ ಬಾರಿಸಿ ಎಚ್ಚರಿಸಲಾಗಿದೆ. ಮುಂದಿನ ದಿನಗಳಲ್ಲಿಯಾದರೂ ಸಾರ್ವಜನಿಕರು ತಮ್ಮ ಮನೆಯ ಹಸಿಕಸ&ಒಣಕಸವನ್ನು ಬೇರ್ಪಡಿಸಿ ಕಸದ ಗಾಡಿಗೆ ಹಾಕಬೇಕು. > ಪದ್ಮನಾಭ, ನಗರಸಭಾ ಸದಸ್ಯ.

ಫೋಟೋ:4ಡಿಬಿಪಿ1 ದೊಡ್ಡಬಳ್ಳಾಪುರದ ಸೋಮೇಶ್ವರ ಬಡಾವಣೆಯಲ್ಲಿ ನಗರಸಭೆ ಆಡಳಿತದಿಂದ ಕ್ಯುಆರ್​ ಕೋಡ್​ ವಿತರಣೆ ಮಾಡಲಾಯಿತು. ನಗರಸಭೆ ಅಧ್ಯೆ ಸುಮಿತ್ರಾ, ಪೌರಾಯುಕ್ತ ಕಾರ್ತಿಕೇಶ್ವರ್​, ನಗರಸಭಾ ಸದಸ್ಯ ರವಿ, ಯುವಸಂಚಲನ ಅಧ್ಯಕ್ಷ ಚಿದಾನಂದ್​, ಸಾರ್ವಜನಿಕರು ಇದ್ದರು.

ಫೋಟೊ:4ಡಿಬಿಪಿ2

ನಗರದ ಮಾರುತಿ ನಗರದಲ್ಲಿ ಕಸದ ಬ್ಲಾಕ್​ ಪಾಯಿಂಟ್​ ಗುರುತು ಮಾಡಿರುವುದು.

ಫೋಟೊ:4ಡಿಬಿಪಿ3

ಕಸವನ್ನು ರಾತ್ರಿ ವೇಳೆ ಎಲ್ಲೆಂದರಲ್ಲಿ ಹಾಕಿರುವವರ ಮನೆ ಮುಂದೆ ತಮಟೆ ಬಾರಿಸಿ ಎಚ್ಚರಿಕೆ ನೀಡುತ್ತಿರುವುದು.

ಫೋಟೊ:4ಡಿಬಿಪಿ4

ಧೀರಜ್​ ಮುನಿರಾಜು, ಶಾಸಕ.

ಫೋಟೊ:3ಡಿಬಿಪಿ5

ಪದ್ಮನಾಭ, ನಗರಸಭಾ ಸದಸ್ಯ.

ಫೋಟೊ:4ಡಿಬಿಪಿ6

ಕಾರ್ತಿಕೇಶ್ವರ್​, ಪೌರಾಯುಕ್ತ, ನಗರಸಭೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net