ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ

track
Published on

ಮಡಿಕೇರಿ:

ಮಡಿಕೇರಿಯ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೂ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಬರಲಿದೆ. ಅತ್ಯುತ್ತಮ ಚಾಲನಾ ಕೌಶಲ್ಯ ರೂಢಿಸಿಕೊಂಡಿದ್ದರೆ ಮಾತ್ರ ಈ ವ್ಯವಸ್ಥೆಯಲ್ಲಿ ಹೊಸದಾಗಿ ಡ್ರೆöÊವಿಂಗ್ ಲೈಸೆನ್ಸ್ ಪಡೆಯಲು ಸಾಧ್ಯವಾಗಲಿದ್ದು, ಅಧಿಕಾರಿಗಳು ಮತ್ತು ದಲ್ಲಾಳಿಗಳ ನಡುವಿನ ಹೊಂದಾಣಿಕೆಗಳಿಗೂ ಕಡಿವಾಣ ಬೀಳಲಿದೆ. ಆರ್‌ಟಿಒ ಸಿಬ್ಬಂದಿ ಮೇಲಿನ ಅಧಿಕ ಕೆಲಸದ ಹೊರೆಯೂ ಇಳಿಯಲಿದೆ. ಈ ಹಿಂದಿನ ಬಜೆಟ್‌ನಲ್ಲೇ ಈ ಯೋಜನೆಯ ಪ್ರಸ್ತಾಪ ಆಗಿದ್ದು, 50 ಲಕ್ಷ ರೂ. ಅನುದಾನ ಕೂಡ ಈಗಾಗಲೇ ಬಿಡುಗಡೆಯೂ ಆಗಿದೆ.

ಹೆಚ್ಚಾಗುತ್ತಿರುವ ರಸ್ತೆ ಅಪಘಾತ ಪ್ರಕರಣಗಳಿಗೆ ಬಹುತೇಕ ಅಜಾಗರೂಕತೆಯ ಚಾಲನೆಯೇ ಕಾರಣ ಎನ್ನುವುದು ಅನೇಕ ವರದಿಗಳಲ್ಲಿ ಬಹಿರಂಗವಾಗಿದೆ. ಚಾಲನೆಯಲ್ಲಿ ನಿರ್ಲಕ್ಷö್ಯ, ಸಂಚಾರಿ ನಿಯಮಗಳ ಬಗ್ಗೆ ಅಸಡ್ಡೆ, ಹೆದ್ದಾರಿಗಳಲ್ಲಿ ಪಥ ಶಿಸ್ತು ಪಾಲಿಸದಿರುವುದು, ಚಾಲನೆಯಲ್ಲಿ ಕೌಶಲ್ಯದ ಕೊರತೆ... ಈ ರೀತಿಯ ಚಾಲನಾ ಸಂಬAಧಿ ಸಮಸ್ಯೆಗಳಿಂದಲೇ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುತ್ತದೆ. ಅಮಾಯಕರು ಪ್ರಾಣ ಕಳೆದುಕೊಳ್ಳುವುದು, ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿ ಜೀವನಪೂರ್ತಿ ನರಳುವುದಕ್ಕೂ ಕಾರಣವಾಗುತ್ತಿರುತ್ತದೆ.

ಇಂಥ ಸಮಸ್ಯೆಗಳಿಗೆ ಮೂಲದಲ್ಲೇ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಸರ್ಕಾರ ಚಾಲಕರಿಗೆ ಚಾಲನ ಪರವಾನಗಿಗಳನ್ನು ಕೊಡುವಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಹಾಗಾಗಿ ರಾಜ್ಯದ ಪ್ರತಿಯೊಂದು ಪ್ರಾದೇಶಿಕ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳ ವ್ಯಾಪ್ತಿಯಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ. ಈ ಮೂಲಕ ಪರಿಣಿತ ಚಾಲಕರಿಗೆ ಮಾತ್ರ ಡಿಎಲ್ ಸಿಗುವುದು ಸಾಧ್ಯವಾಗುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ. ಹಾಗಾಗಿಯೇ ಕಳೆದ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಲಾಗಿದೆ.

ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳು ಕಾರ್ಯಾಚರಣೆ ಆರಂಭಿಸುವುದರಿAದ ಕೇವಲ ನಿಪುಣ ಚಾಲಕರಿಗೆ ಮಾತ್ರ ಚಾಲನಾ ಪರವಾನಗಿ ಸಿಗುವುದೊಂದೇ ಪ್ರಯೋಜನ ಅಲ್ಲ. ಹೆಚ್ಚಿನ ಆರ್‌ಟಿಒಗಳಲ್ಲಿ ಮನೆ ಮಾಡಿರುವ ಭ್ರಷ್ಟಾಚಾರಕ್ಕೂ ನಿಯಂತ್ರಣ ಹಾಕಬಹುದಿ ಎಂದು ಹೇಳಲಾಗುತ್ತಿದೆ. ಆರ್‌ಟಿಒಗಳಲ್ಲಿ ದಲ್ಲಾಳಿಗಳಿಗೆ ಅವಕಾಶ ಇಲ್ಲ. ಎಲ್ಲಾ ಸೇವೆಗಳನ್ನು ಆನ್‌ಲೈನ್ ಮಾಡಲಾಗಿದೆ ಎಂದು ಸರ್ಕಾರ, ಹಿರಿಯ ಅಧಿಕಾರಿಗಳು ಎಷ್ಟೇ ಸಮರ್ಥಿಸಿಕೊಂಡರೂ ನೇರವಾಗಿ ಹೋದಾಗ ಸುಲಭವಾಗಿ ಆಗದ ಕೆಲಸ ದಲ್ಲಾಳಿಗಳ ಮೂಲಕ ಹೋದಾಗ ಸಲೀಸಾಗಿ ಮುಗಿದು ಹೋಗುವುದು ಇಂದಿಗೂ ಕಾಣಬಹುದು. ಡಿಎಲ್ ಕೂಡ ಇದರಿಂದ ಹೊರತಾಗಿಲ್ಲ. ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಕಾರ್ಯಾರಂಭ ಮಾಡಿದರೆ ಅಧಿಕಾರಿಗಳು ಮತ್ತು ದಲ್ಲಾಳಿಗಳ ಮಧ್ಯೆ ಇರುವ ಕಳ್ಳಾಟಕ್ಕೆ ಅವಕಾಶ ಇರುವುದಿಲ್ಲ.

ಚಾಲನಾ ಪರೀಕ್ಷೆಗಾಗಿ ಬರುವ ಯಾವುದೇ ವಾಹನ ಚಾಲಕನಿಗೆ ನಿಯಮಾನುಸಾರ ಚಾಲನಾ ಪರವಾನಗಿ ಕೊಡುವ ಇಲಾಖೆ ಅಧಿಕಾರಿಗಳು ಅನುಸರಿಸುವ ವಿಧಾನ ಈ ಹೊಸ ವಿಧಾನ ಸುಲಭವಾಗಿಸಲಿದೆ. ಸಿಬ್ಬಂದಿಯ ಕೆಲಸದ ಹೊರೆಯೂ ಕಡಿಮೆಯಾಗಲಿದೆ. ಪ್ರತಿಯೊಂದು ವಿವರ ಕಂಪ್ಯೂಟರ್‌ನಲ್ಲಿ ದಾಖಲಾಗುವುದರಿಂದ ಪಾರದರ್ಶಕತೆ ಅನುಸರಿಸಲು ಅನುಕೂಲವಾಗಲಿದೆ. ವಾಹನ ಸವಾರರ ಚಾಲನಾ ಸಾಮರ್ಥ್ಯವನ್ನು ಹೊಸ ತಂತ್ರಜ್ಞಾನದಿAದ ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ. ಈಗಿನ ಮ್ಯಾನುವಲ್ ಪದ್ಧತಿಯಲ್ಲಿ ಚಾಲನೆಯಲ್ಲಿ ಸಣ್ಣ ಪುಟ್ಟ ದೋಷಗಳಿದ್ದರೂ ಪರವಾನಗಿ ಸಿಕ್ಕಿಬಿಡುತ್ತದೆ. ಆದರೆ ಹೊಸ ವ್ಯವಸ್ಥೆಯಲ್ಲಿ ಇದು ಸಾಧ್ಯವಾಗುವುದಿಲ್ಲ. ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥದಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಿ ಪರೀಕ್ಷೆ ಮಾಡುವ ವಿಧಾನ ಇರುವುರಿಂದ ಚಾಲನೆಯಲ್ಲಿನ ಎಲ್ಲಾ ದೋಷಗಳೂ ದಾಖಲಾಗುತ್ತದೆ.

ಪ್ರಸ್ತುತ ರಾಜ್ಯದಲ್ಲಿ 7 ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳು ಕಾರ್ಯಾಚರಿಸುತ್ತಿದ್ದು, ಸೆನ್ಸಾರ್ ಆಧಾರಿತ ತಂತ್ರಜ್ಞಾನ ಅಳವಡಿಸಲಾಗಿದೆ. ಅಭ್ಯರ್ಥಿಗಳ ವಾಹನ ಚಾಲನಾ ಕೌಶಲ್ಯವನ್ನು ಸೆನ್ಸಾರ್‌ಗಳ ಮೂಲಕ ಪರೀಕ್ಷಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಕೊಡಗಿನಲ್ಲಿ ಮಡಿಕೇರಿ ಸೇರಿದಂತೆ 27 ಜಿಲ್ಲೆಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಮಡಿಕೇರಿಯಲ್ಲಿ ನಿರ್ಮಾಣ ಆಗಲಿರುವ 'ಮಡಿಕೇರಿ ಡ್ರೆöÊವಿಂಗ್ ಟ್ರಾö್ಯಕ್'ಗೆ 5.70 ಕೋಟಿ ರೂ. ವೆಚ್ಚ ತಗುಲುವ ಅಂದಾಜು ಮಾಡಲಾಗಿದ್ದು 50 ಲಕ್ಷ ರೂ. ಅನುದಾನ ಈಗಾಗಲೇ ಬಿಡುಗಡೆ ಆಗಿದೆ. ಕಾಮಗಾರಿ ಇನ್ನಷ್ಟೇ ಶುರುವಾಗಬೇಕಿದೆ.

ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಎಟಿಎಸ್ ನಿರ್ಮಿಸಲು ಜಮೀನು ಲಭ್ಯ ಇರುವ ಕಡೆಗಳಲ್ಲಿ ಡಿಸೈನ್ ಬಿಲ್ಡ್ ಫೈನಾನ್ಸ್ ಆಪರೇಟ್ ಮತ್ತು ಟ್ರಾನ್ಸ್ಫರ್ ಮತ್ತು ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ಬಿಲ್ಡ್ ಓನ್ ಆಪರೇಟ್ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ.

ಡಿಸೈನ್ ಬಿಲ್ಡ್ ಫೈನಾನ್ಸ್ ಆಪರೇಟ್ ಮತ್ತು ಟ್ರಾನ್ಸ್ಫರ್ ಮಾದರಿಯಲ್ಲಿ ನಿರ್ಮಿಸಲಾಗುವ ಎಟಿಎಸ್‌ಗಳಿಗೆ ಸಾರಿಗೆ ಇಲಾಖೆ ಜಮೀನು ಕೊಡುತ್ತದೆ. ಕಟ್ಟಡ ನಿರ್ಮಾಣ, ಯಂತ್ರೋಪಕರಣಗಳ ಅಳವಡಿಕೆಯನ್ನು ಖಾಸಗಿ ಅಥವಾ ಟೆಂಡರ್‌ನಲ್ಲಿ ಆಯ್ಕೆಯಾಗುವ ಸಂಸ್ಥೆಗಳು ನಿರ್ಮಿಸಿ, ನಿಗದಿತ ಸಮಯದ ತನಕ ಕಾರ್ಯಾಚರಿಸಿ ನಂತರ ಈ ವ್ಯವಸ್ಥೆಯನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಬೇಕಾಗುತ್ತದೆ.

ಬಿಲ್ಡ್ ಓನ್ ಆಪರೇಟ್ ಮಾದರಿಯಲ್ಲಿ ಕಾರ್ಯಾಚರಿಸುವ ವ್ಯವಸ್ಥೆಯಲ್ಲಿ ಟೆಂಡರ್‌ನಲ್ಲಿ ಆಯ್ಕೆ ಆಗುವ ಸಂಸ್ಥೆಗಳೇ ಜಾಗದೊಂದಿಗೆ ಕಟ್ಟಡ ನಿರ್ಮಾಣ ಮತ್ತು ಯಂತ್ರೋಪಕರಣ ಅಳವಡಿಕೆ ಕಾರ್ಯಗಳನ್ನು ಕೈಗೊಂಡು ನಿಗದಿತ ಸಮಯದ ತನಕ ಕಾರ್ಯಾಚರಿಸಬೇಕು. ಈ ಮಾದರಿಯಲ್ಲಿ ಎಟಿಎಸ್‌ಗಳನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಬೇಕಾಗಿಲ್ಲ. ಮಡಿಕೇರಿಯಲ್ಲಿ ಆರಂಭವಾಗುವ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಬಿಲ್ಡ್ ಓನ್ ಆಪರೇಟ್ ಮಾದರಿಯಲ್ಲಿ ಕಾರ್ಯಾಚರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net