

ಮಂಗಳೂರು: ನಗರದಲ್ಲಿ ಕಳೆದುಹೋದ ಅಥವಾ ಕಳವಾದ 2133 ಮೊಬೈಲ್ ಫೋನ್‌ಗಳ ಪೈಕಿ ಇದುವರೆಗೆ 240 ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳಲ್ಲಿ 93 ಮೊಬೈಲ್‌ಗಳನ್ನು ನಗರ ಪೊಲೀಸ್ ಆಯುಕ್ತರು ಶನಿವಾರ ವಾರಸುದಾರರಿಗೆ ಹಸ್ತಾಂತರಿಸಿದರು.
ಪತ್ತೆಯಾದ 240 ಮೊಬೈಲ್‌ಗಳ ಪೈಕಿ ಉಳಿದ 147 ಮೊಬೈಲ್‌ಗಳನ್ನು ಈಗಾಗಲೇ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಇದೇ ಸಂದರ್ಭ ಕುಲದೀಪ್ ಜೈನ್ ತಿಳಿಸಿದರು.
ತನ್ನ ಕೀಪ್ಯಾಡ್ ಮೊಬೈಲ್ ಫೋನ್ ಮರಳಿ ಪಡೆದದ್ದಕ್ಕೆ ಹರ್ಷಗೊಂಡ ಮಣ್ಣಗುಡ್ಡೆಯ ಸುಕುಮಾರ್ ಶೆಟ್ಟಿ ಅವರು ಆಯುಕ್ತರಿಗೆ ಪುಷ್ಪಗುಚ್ಛ ನೀಡಿ ಕೃತಜ್ಞತೆ ಸಲ್ಲಿಸಿದರು. ಅವರು ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಿದ್ದು, ತನ್ನ ಫೋನ್‌ನಲ್ಲಿ 3 ಸಾವಿರದಷ್ಟು ಗ್ರಾಹಕರ ಸಂಪರ್ಕ ಸಂಖ್ಯೆಗಳನ್ನು ಹೊಂದಿದ್ದರು. ಅದೆಲ್ಲವೂ ಈಗ ಮರಳಿ ದೊರೆತಿದೆ ಎಂದು ಧನ್ಯವಾದ ಅರ್ಪಿಸಿದರು.
ಕಳೆದುಕೊಂಡ ಮೊಬೈಲ್ ಪತ್ತೆಗೆ ಕೇಂದ್ರ ಸರ್ಕಾರ ಡಿಡಿಡಿ.್ಚಛಿಜ್ಟಿ.ಜಟ.ಜ್ಞಿ ಪೋರ್ಟಲ್ ವ್ಯವಸ್ಥೆಗೊಳಿಸಿದೆ. ಇದನ್ನು ಇನ್ನಷ್ಟು ಸರಳಗೊಳಿಸಲು ಇತ್ತೀಚೆಗೆ ಮಂಗಳೂರು ಪೊಲೀಸ್ ಆಯುಕ್ತರು ವಿನೂತನ ವ್ಯವಸ್ಥೆ ಜಾರಿಗೊಳಿಸಿದ್ದರು. ಅದರಂತೆ ಮೊ.8277949183 ಸಂಖ್ಯೆಗೆ ಹಾಯ್ ಎಂದು ಮೆಸೆಜ್ ಕಳುಹಿಸಿದ ಬಳಿಕ ಒಂದು ಗೂಗಲ್ ಫಾರಂ ದೊರೆಯುತ್ತದೆ. ಅದರಲ್ಲಿ ದೂರುದಾರರು ಕಳೆದುಹೋದ ಮೊಬೈಲ್‌ನ ದಾಖಲೆಗಳನ್ನು ದಾಖಲಿಸಬೇಕು. ಹೀಗೆ ದೂರು ದಾಖಲಿಸಿದ ಒಟ್ಟು 2133 ಮೊಬೈಲ್‌ಗಳ ಪೈಕಿ 524 ಮೊಬೈಲ್ ಫೋನ್‌ಗಳು ಪತ್ತೆಯಾಗುವ ಮಾಹಿತಿ ದೊರೆತಿದೆ.