

ಬಿಡದಿ: ಟೊಯೋಟಾ ಕಿಲೋಸ್ಕರ್ ಕಂಪನಿ ಆಡಳಿತ ಮಂಡಳಿ ಇನ್ನೆರಡು ದಿನದಲ್ಲಿ ಕಾರ್ವಿುಕ ಸಂಘಟನೆಯ ಪದಾಧಿಕಾರಿಗಳ ಜತೆ ರ್ಚಚಿಸಿ ಸಮಸ್ಯೆ ಬಗೆಹರಿಸಿಕೊಳ್ಳದಿದ್ದರೆ ಮುಷ್ಕರದಲ್ಲಿ ನಾನೂ ಪಾಲ್ಗೊಳ್ಳುವುದಾಗಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಈಗಲ್ಟನ್ ರೆಸಾರ್ಟ್ನಲ್ಲಿ ಬುಧವಾರ ಟಿಕೆಎಂ ಅಧಿಕಾರಿಗಳ ಸಭೆ ನಂತರ ಕಾರ್ವಿುಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಾನು ಪ್ರತಿಭಟನೆ ಕುಳಿತರೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂದು ಕಂಪನಿಗೆ ಪರೋಕ್ಷ ಎಚ್ಚರಿಕೆ ನೀಡಿದರು. ಟೊಯೋಟಾ ಕಂಪನಿ ಬೆದರಿಕೆ ತಂತ್ರ ಅನುಸರಿಸುತ್ತಿರುವುದು ಸರಿಯಲ್ಲ. ಕೂಡಲೇ 71 ಕಾರ್ವಿುಕರ ಅಮಾನತು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನಾನು ನನ್ನ ಮಧ್ಯಸ್ಥಿಕೆಯಲ್ಲಿ ಸಭೆ ನಡೆಸಿ ರಾಜಕಾರಣ ಮಾಡಲು ಬಂದಿಲ್ಲ. ಬದಲಿಗೆ ಕಂಪನಿ ಮತ್ತು ಕಾರ್ವಿುಕರ ಹಿತ ಕಾಯುವ ಕೆಲಸ ಮಾಡಲು ಬಂದಿದ್ದೇನೆ. 45 ದಿನಗಳಿಂದ ನಡೆಸುತ್ತಿರುವ ಮುಷ್ಕರ ಜಟಿಲವಾಗುತ್ತಿರುವುದನ್ನು ಗಮನಿಸಿ ಕಂಪನಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಸರ್ಕಾರ ಮಧ್ಯ ಪ್ರವೇಶಿಸಿ ಬಿಕ್ಕಟ್ಟು ಪರಿಹಾರಕ್ಕೆ ಪ್ರಯತ್ನಿಸಿದರೂ ಕಂಪನಿ ತನ್ನ ನಿಲುವು ಬದಲಿಸದೆ ಕಾರ್ವಿುಕ ವರ್ಗವನ್ನು ವಿಮುಕ್ತಿ ಮಾಡುವ ಹುನ್ನಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಮ್ಮ ಜತೆ ನಾನಿರುತ್ತೇನೆ: ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕಂಪನಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಒಂದು ವೇಳೆ ಬಗೆಹರಿಸದಿದ್ದಲ್ಲಿ ನಿಮಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಹೋರಾಟದಲ್ಲಿ ನಾನೂ ಪಾಲ್ಗೊಳ್ಳುತ್ತೇನೆ. ನೀವು ಧೈರ್ಯವಾಗಿರಿ. ನಿಮ್ಮ ಜತೆ ನಾನಿರುತ್ತೇನೆ ಎಂದು ಮುಷ್ಕರ ನಿರತ ಕಾರ್ವಿುಕರಿಗೆ ಧೈರ್ಯ ತುಂಬಿದರು.
ಟಿಕೆಎಂ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಜಪಾನ್ ಮುಖ್ಯ ಕಚೇರಿಯ ಆಡಳಿತ ಮಂಡಳಿ ಅನುಮತಿ ಬೇಕೆಂದು ನನ್ನ ಎಲ್ಲ ಮನವಿಗಳನ್ನು ತಿರಸ್ಕಾರ ಮಾಡಿದ್ದಾರೆ. ಕಾರ್ವಿುಕರಿಗೆ ರಕ್ಷಣೆ ಮತ್ತು ಭದ್ರತೆ ನೀಡುವಲ್ಲಿ ಕಂಪನಿ ವಿಫಲವಾಗಿದೆ. ಕಂಪನಿ ಹಿತಾಸಕ್ತಿ ಎಷ್ಟು ಮುಖ್ಯವೋ ಕಾರ್ವಿುಕರ ರಕ್ಷಣೆ ಅಷ್ಟೇ ಮುಖ್ಯವಾಗಿದೆ. ಹಾಗಾಗಿ ಕಾರ್ವಿುಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ. | ಡಿ.ಕೆ.ಸುರೇಶ್ ಸಂಸದ