ಟಿಕೆಎಂನಿಂದ ಸರ್ಕಾರಕ್ಕೆ 2 ಕೋಟಿ ರೂಪಾಯಿ ದೇಣಿಗೆ

14-4-2020 bidadi photo 2
Published on

ಬಿಡದಿ: ಕೋವಿಡ್-19 ಸೋಂಕು ನಿಯಂತ್ರಣ ಹೋರಾಟಕ್ಕೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್‌ (ಟಿಕೆಎಂ) ಸಂಸ್ಥೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂ. ನೆರವು ನೀಡಿದೆ.

ಬಡಜನರ ಜೀವನ ಪುನರುಜ್ಜೀವನಕ್ಕೆ ನೆರವಾಗಲು ಮುಖ್ಯಮಂತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಿಕೆಎಂ ಉಪಾಧ್ಯಕ್ಷ ಹಾಗೂ ಪೂರ್ಣಾವಧಿ ನಿರ್ದೇಶಕ ಶೇಖರ್ ವಿಶ್ವನಾಥನ್ ಹಾಗೂ ಉಪವ್ಯವಸ್ಥಾಪಕ ನಿರ್ದೇಶಕ ರಾಜು ಬಿ.ಕೆಟ್ಕಲೆ ಮತ್ತು ನೌಕರರ ಸಂಘದ ಕಾರ್ಯದರ್ಶಿ ಎಸ್.ದೀಪಕ್‌ಕುಮಾರ್ ಅವರು ಬೆಂಗಳೂರಿನ ಸಿಎಂ ನಿವಾಸದಲ್ಲಿ ಚೆಕ್ ಅನ್ನು ಸೋಮವಾರ ಹಸ್ತಾಂತರಿಸಿದರು.

ಇದರಲ್ಲಿ 1,35,48,553 ರೂ. ಟಿಕೆಎಂ ದೇಣಿಗೆಯಾಗಿದ್ದು, ಇದನ್ನು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೀಡಲಾಗಿದೆ. ಉಳಿದ 64,51,447 ರೂ.ಗಳು ನೌಕರರಿಂದ ಸಂಗ್ರಹಿಸಿದ ಮೊತ್ತವಾಗಿದ್ದು ಇದನ್ನು ಸಿಎಂ ಪರಿಹಾರ ನಿಧಿಗೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net