

ಬಿಡದಿ: ಟೊಯೋಟಾ ಕಿಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆ ಮಂಗಳವಾರ ಮತ್ತೆ ಐವರು ಕಾರ್ವಿುಕರನ್ನು ಅಮಾನತುಗೊಳಿಸಿದೆ. ಮುಷ್ಕರ ಆರಂಭಗೊಂಡ ನಂತರ ಇಲ್ಲಿಯವರೆಗೆ 71 ಕಾರ್ವಿುಕರನ್ನು ಅಮಾನತುಗೊಳಿಸಲಾಗಿದೆ ಎಂದು ಕಂಪನಿ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ. ಕರ್ತವ್ಯಕ್ಕೆ ಸತತವಾಗಿ ಗೈರಾಗುತ್ತಿದ್ದ ಕಾರಣ ಅಮಾನತು ಮಾಡಲಾಗಿದೆ. ಕೆಲಸಕ್ಕೆ ಹಾಜರಾಗುವಂತೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಗೈರಾಗಿದ್ದರಿಂದ ಸ್ವತಂತ್ರ ಸಮಿತಿ ತನಿಖೆ ನಡೆಸಿ ನೀಡಿದ ವರದಿ ಆಧಾರದಲ್ಲಿ ಅಮಾನತುಗೊಳಿಸಲಾಗಿದೆ. ಹಾಗೂ ಇವರಲ್ಲಿ ಇಬ್ಬರು ದುರ್ನಡತೆ ಹೊಂದಿದ್ದರು ಎಂದು ಕಂಪನಿ ತಿಳಿಸಿದೆ. ಪ್ರತಿಕ್ರಿಯಿಸಿರುವ ಕಾರ್ವಿುಕ ಸಂಘ, ಪ್ರತಿಭಟನೆ ಹತ್ತಿಕ್ಕಲು ಹಾಗೂ ಕಾರ್ವಿುಕರನ್ನು ಬೆದರಿಸಲು ಹಳೇ ಆರೋಪಗಳಿಗೆ ಗುರಿ ಮಾಡಿ ಅಮಾನತುಗೊಳಿಸಲಾಗಿದೆ. ಕಂಪನಿಯ ಈ ಬೆದರಿಕೆಗೆ ಜಗ್ಗದೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ತಿಳಿಸಿದೆ.