

ಮೈಸೂರು: ನಗರದ ಟೌನ್‌ಹಾಲ್‌ನ ಪಾರ್ಕಿಂಗ್ ಕಟ್ಟಡವನ್ನು ದಸರಾ ಸಂದರ್ಭ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಮೇಯರ್ ಶಿವಕುಮಾರ್ ಗುರುವಾರ ಸ್ಥಳ ಪರಿಶಿಲನೆ ನಡೆಸಿದರು.
ಟೌನ್ ಹಾಲ್ ಆವರಣದಲ್ಲಿ ರಾಶಿ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲಾಯಿತು. ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಬೇಕಾಗಿದ್ದು, ಇದಕ್ಕೆ ವಿದ್ಯುತ್ ಮಾರ್ಗ ಅಡ್ಡಿಯಾಗಿದೆ. ಒಂದೆರಡು ದಿನಗಳ ಒಳಗೆ ವಿದ್ಯುತ್ ಮಾರ್ಗವನ್ನು ಬದಲಿಸಿ ಚರಂಡಿ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಮೇಯರ್ ಸೂಚನೆ ನೀಡಿದರು.