ರಸ್ತೆ ಕಾಮಗಾರಿಗೆ ಒಂದು ಕೋಟಿ ರೂ. ಅನುದಾನ

26 tth 01
Published on

ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಒಂದು ಕೋಟಿ ರೂ. ಅನುದಾನ ಬಿಡá-ಗಡೆಯಾಗಿದ್ದು ಹಂತಹಂತವಾಗಿ ಎಲ್ಲ ಪ್ರಮುಖ ರಸ್ತೆಗಳನ್ನೂ ಕಾಂಕ್ರೀಟ್ ರಸ್ತೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಶನಿವಾರ ಪಟ್ಟಣದ ಮಾರ್ಕೆಟ್ ರಸ್ತೆ ಮತ್ತು ಸಿನಿಮಾ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿ, ಒಂದು ಕೋಟಿ ಅನುದಾನದಲ್ಲಿ ಅತಿ ಅಗತ್ಯವಿರುವ ಈ ಎರಡು ರಸ್ತೆಗಳಲ್ಲದೆ ದೊಡ್ಡಮನೆ ಕೇರಿ, ಬೆಟ್ಟಮಕ್ಕಿ ಬಡಾವಣೆಯ ರಸ್ತೆ ಹಾಗೂ ಒಂದು ಮೋರಿಯ ಕಾಮಗಾರಿಯನ್ನು ಸಹ ಕೈಗೆತ್ತಿಕೊಳ್ಳಲಾಗಿದೆ. ಉಳಿದಂತೆ ಮಸೀದಿ ರಸ್ತೆ ಸೇರಿ ಉಳಿದ ಪ್ರಮುಖ ಬೀದಿಯ ರಸ್ತೆಗಳನ್ನು ಮೇಲ್ಮಟ್ಟಕ್ಕೆ ಏರಿಸಲಾಗುವುದು ಎಂದರು. ಪಪಂ ಮಾಜಿ ಅಧ್ಯಕ್ಷ ಸಂದೇಶ್ ಜವಳಿ, ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಬಿಜೆಪಿ ಮುಖಂಡರಾದ ಕೆ.ನಾಗರಾಜ ಶೆಟ್ಟಿ, ರಾಘವೇಂದ್ರ ನಾಯಕ್, ಬೇಗುವಳ್ಳಿ ಕವಿರಾಜ್ ಹಾಗೂ ನವೀನ್ ಹೆದ್ದೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net